IPL ಅಭಿಮಾನಿಗಳಿಗೆ ಮಹತ್ವದ ಮಾಹಿತಿ.! ಇನ್ನು ಮುಂದೆ ಐಪಿಎಲ್ ಪಂದ್ಯಗಳು ನಡೆಯಲ್ಲ.?

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದದ ವಾತಾವರಣ ಏರ್ಪಟ್ಟ ಹಿನ್ನಲ್ಲೆ ಐಪಿಎಲ್ ನ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸುವ ಬಗ್ಗೆ ಬಿಸಿಸಿಐ ನಿರ್ಧಾರಿಸಿದೆ ಎಂದು ಹೇಳಲಾಗಿದೆ. ಕಳೆದ ರಾತ್ರಿ ಪಂಜಾಬ್ ಹಾಗೂ ಡೆಲ್ಲಿ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು ಅದರೆ ಸದ್ಯದ ಮಾಹಿತಿಯ ಪ್ರಕಾರ ಉಳಿದ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.

ಐಪಿಎಲ್ ನ ಪಂದ್ಯಗಳಿಗೆ ಯುದ್ದ ಕಾರ್ಮೋಡದ ಭಯ ಇರುವುದರಿಂದ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ತಿಳಿದು ಬಂದಿದೆ. ಕ್ರೀಡೆ ಹಾಗೂ ಮನರಂಜನೆಗಿಂತ ದೇಶ ಮೊದಲು ಎಂಬ ಸಂದೇಶವನ್ನು ಮತ್ತೊಮ್ಮೆ ಸಾಭೀತುಪಡಿಸಲಾಗಿದೆ. ಈ ಸುದ್ದಿ ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ಮೂಡಿಸಿದ್ದರು ದೇಶದ ಭದ್ರತಾ ಹಿತದೃಷ್ಠಿಯಿಂದ ಇದು ಅನಿವಾರ್ಯ ಹಾಗೂ ಅತ್ಯಗತ್ಯ.

 

Comments