ಶ್ರೀ ಸುಬ್ರಮಣ್ಯಸ್ವಾಮಿ ಆಶೀರ್ವಾದದಿಂದ ನಿಮ್ಮ ರಾಶಿ ಭವಿಷ್ಯ.! ಮೂರು ರಾಶಿಗಳಿಗೆ ಇಂದು ಶುಭ

ಮೇಷ ರಾಶಿ

ಸಾಲ ಮರುಪಾವತಿಗೆ ಕಷ್ಟಗಳು ಎದುರಾಗಬಹುದು. ಈ ಹಿಂದೆ ಹಾಕಿದ ಶ್ರಮಕ್ಕೆ ಸಮಾಧಾನಕರವಾದ ಫಲಿತಾಂಶ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಂತೋಷವಾದ ಕ್ಷಣಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಭೂಮಿ ಹಾಗೂ ಆಸ್ತಿ ವ್ಯವಹಾರಗಳಲ್ಲಿ ಸಮಾಧಾನಕರ ಫಲಿತಾಂಶ ಸಿಗಲಿದೆ.

 ವೃಷಭ ರಾಶಿ

ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಪ್ರೀತಿ-ಪ್ರೇಮ ಸಂಬಂಧದಲ್ಲಿ ಉತ್ತಮ ಬಾಂಧವ್ಯ, ಪರಸ್ಪರ ಬೆಂಬಲ ಇರುತ್ತದೆ. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ, ಕ್ರೀಡಾ ಕ್ಷೇತ್ರಗಳಲ್ಲಿ ನೀಡುವ ಇಂಟರ್ ವ್ಯೂಗಳಲ್ಲಿ ಯಶಸ್ಸು ಕಾಣುತ್ತೀರಿ. ಹಣ ಬಂದು ನಿಮ್ಮ ಬಳಿ ಸೇರಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ.

ಮಿಥುನ ರಾಶಿ

ಸಂಗಾತಿ ಜತೆಗೆ ಸಂಬಂಧ ಗಾಢವಾಗುತ್ತದೆ. ಸುಮಧುರವಾದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ಬಾಹ್ಯ ಸೌಂದರ್ಯ ವೃದ್ಧಿ ಆಗಲಿದೆ. ವಾರದ ಅಂತ್ಯಕ್ಕೆ ಸರಿಯುತ್ತಾ ವೈಯಕ್ತಿಕ ಸಂಬಂಧದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತವೆ. ಶತ್ರುಗಳು ನಿಮಗೆ ಬಾಧೆ ನೀಡುವ ಸಾಧ್ಯತೆಗಳಿವೆ. ಆರ್ಥಿಕ ಹೂಡಿಕೆಯಲ್ಲಿ ಮಹತ್ತರವಾದ ಬೆಳವಣಿಗೆ ಸಾಧಿಸುತ್ತೀರಿ.


ಕರ್ಕಾಟಕ ರಾಶಿ

ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಆರೋಗ್ಯವಾಗಿ, ದೈಹಿಕವಾಗಿ ಸದೃಢರಾಗಿ ಇರುತ್ತೀರಿ. ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉಜ್ವಲವಾದ ಅವಕಾಶಗಳಿವೆ. ವೈಯಕ್ತಿಕ ಸಂಬಂಧಗಳು ಗಟ್ಟಿ ಆಗಲಿವೆ. ಅಂತಃಕರಣ ಹೆಚ್ಚಾಗಲಿದೆ.

ಸಿಂಹ ರಾಶಿ

ನಿಮ್ಮ ಸೋದರ ಸಂಬಂಧಿಗಳ ಜತೆಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಹಳೆಯ ಮನಸ್ತಾಪಗಳು ನಿವಾರಣೆ ಆಗುತ್ತವೆ. ವಿದೇಶಿ ವ್ಯವಹಾರಗಳು ಹಾಗೂ ಹೂಡಿಕೆಯಲ್ಲಿ ಸಮಾಧಾನಕರವಾದ ಬೆಳವಣಿಗೆ ಆಗಲಿದೆ. ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯಪೂರ್ಣವಾದ ಪಥ್ಯವನ್ನು ಅನುಸರಿಸುವುದು ಬಹಳ ಮುಖ್ಯ.

ಕನ್ಯಾ ರಾಶಿ

ಸಂಬಂಧ ಸಂಭಾಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕಬೇಕು. ದಿಢೀರನೇ ದೂರ ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಆರೋಗ್ಯ ಸ್ಥಿತಿಯು ಕ್ಷೀಣಿಸಲಿದೆ. ಶತ್ರುಗಳಿಂದ ಬಾಧೆ ಏರ್ಪಡಲಿದೆ. ಸಮತೋಲನದ ಜೀವನ ಕ್ರಮದಿಂದ ಅನುಕೂಲ ಆಗಲಿದೆ.

ತುಲಾ ರಾಶಿ

ವ್ಯಾಪಾರ ಹಾಗೂ ಸೇವಾ ವಲಯದಲ್ಲಿ ಇರುವವರಿಗೆ ಅದ್ಬುತವಾದ ಯಶಸ್ಸು ದೊರೆಯಲಿದೆ. ಆರ್ಥಿಕ ವಿಚಾರಗಳಲ್ಲಿ ನಿರೀಕ್ಷೆಯೇ ಮಾಡಿರದಷ್ಟು ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜತೆಗೆ ಪರಸ್ಪರ ಉತ್ತಮ ಸಂಬಂಧ ಹಾಗೂ ಬಾಂಧವ್ಯ ಇರುತ್ತದೆ.

ವೃಶ್ಚಿಕ ರಾಶಿ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಚಟುವಟಿಕೆಯಿಂದ ಪಾಲ್ಗೊಳ್ಳುತ್ತೀರಿ. ಕೌಟುಂಬಿಕವಾಗಿ ಪ್ರಮುಖವಾದ ವಿಚಾರವೊಂದರಲ್ಲಿ ಸೋದರ ಅಥವಾ ಸೋದರಿ ಜತೆಗೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಬಗೆಹರಿಸಿಕೊಳ್ಳುತ್ತೀರಿ. ಈ ಹಿಂದಿನ ಮನಸ್ತಾಪಗಳನ್ನು ಮರೆಯುತ್ತೀರಿ. ವೃತ್ತಿಪರರು ಗುರಿಯನ್ನು ಸಾಧಿಸುವಲ್ಲಿ ಸಫಲರಾಗಲಿದ್ದೀರಿ.

ಧನಸ್ಸು ರಾಶಿ

ಖಾಸಗಿ ಅಥವಾ ಸರಕಾರಿ ವಲಯದಲ್ಲಿ ನೀಡಿದ ಸಂದರ್ಶನಗಳು ಯಶಸ್ವಿ ಆಗಲಿವೆ ಎಂಬ ಸುಳಿವು ದೊರೆಯಲಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಕಡೆಗೆ ನಿಮ್ಮ ಮನಸ್ಸು ವಾಲುತ್ತದೆ. ರಾಜಕೀಯ ಜೀವನದಲ್ಲಿ ಪ್ರಗತಿ ಕಾಣುತ್ತೀರಿ. ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ನಿಮ್ಮ ನಡತೆಯಿಂದ ತಂದೆ-ತಾಯಿಗಳಿಗೆ ಸಂತೋಷವಾಗುತ್ತದೆ.

ಮಕರ ರಾಶಿ

ದಾನ-ಧರ್ಮ, ಸಾಮಾಜಿಕ ಕೆಲಸ- ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಉದ್ಯೋಗ ಅಥವಾ ವ್ಯಾಪಾರ ರಂಗದಲ್ಲಿ ಇರುವವರಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ. ವಿವಿಧ ಮೂಲಗಳಿಂದ ಗಮನಾರ್ಹವಾದ ಅಸ್ತಿ ದೊರೆಯುವ ಅವಕಾಶಗಳಿವೆ. ಸೇವಾ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಬಡ್ತಿ ದೊರೆಯುವ ಅವಕಾಶಗಳು ಹೆಚ್ಚಾಗಿವೆ.

ಕುಂಭ ರಾಶಿ

ವಿದೇಶಗಳಲ್ಲಿ ವಾಸ ಇರುವವರು ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತೀರಿ. ಹೆಚ್ಚಿನ ಆದಾಯ ಮೂಲದಿಂದ ದೊಡ್ಡ ಪ್ರಮಾಣದ ಲಾಭ ಗಳಿಸುವ ಸಾಧ್ಯತೆಗಳಿವೆ. ವೈಯಕ್ತಿಕ ಸಂಬಂಧಗಳು ಸುಧಾರಿಸುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಮಿಶ್ರ ಫಲ ಅನುಭವಿಸುತ್ತೀರಿ. ಒಟ್ಟಾರೆ ಮಿಶ್ರ ಫಲಗಳು ಅನುಭವಕ್ಕೆ ಬರುತ್ತವೆ.

ಮೀನ ರಾಶಿ

ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವಿದೇಶ ವ್ಯವಹಾರ, ಹೂಡಿಕೆಯಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ವಿರೋಧಿ ಪಾಳಯದವರಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ವೃತ್ತಿಪರ ಯಶಸ್ಸು ಸಾಧಿಸುವ ಸಲುವಾಗಿ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಪಾಲಿಗೆ ಅದೃಷ್ಟ ಒದಗಿ ಬರಲಿದೆ.

Comments