ಬಿಡುಗಡೆಗೂ ಮುನ್ನ ಹುಬ್ಬಳ್ಳಿಯಲ್ಲಿ ಧೂಳೆಬ್ಬಿಸಲು ಸಿದ್ದವಾದ 'ರಾಬರ್ಟ್​'

ಕೇವಲ ಕನ್ನಡ ಸಿನಿಪ್ರಿಯರಲ್ಲದೇ ತೆಲಗು ತಮಿಳು ಸಿನಿಪ್ರಿಯರಲ್ಲೂ ತೀವ್ರ ಕುತೂಹಲ ಹುಟ್ಟಿಹಾಕಿರುವ ರಾರ್ಬಟ್​ ಚಿತ್ರ ಮುಂದಿನ ತಿಂಗಳು ಮಾರ್ಚ್ 11 ರಂದು ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಿಡುಗಡೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಚಿತ್ರ ತಂಡ ಉತ್ತರ ಕರ್ನಾಟಕದ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಚಿತ್ರ ಬಿಡುಗಡೆಗೂ ಮುನ್ನ ಹುಬ್ಬಳ್ಳಿಯಲ್ಲಿ ಫೆ 28 ರಂದು ರಾಬರ್ಟ್​ ಪ್ರಿ ರಿಲೀಸ್ ಇವೆಂಟ್​ನ್ನು ಆಯೋಜಿಸಿದೆ. ಕಾರ್ಯಕ್ರಮ ಏನು, ಅದರ ರೂಪುರೇಷೆಗಳೇನು ಎಂಬುದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಆದರೆ, ಬಿಡುಗಡೆಗೂ ಮುನ್ನ ಹುಬ್ಬಳ್ಳಿಯಲ್ಲಿ ರಾಬರ್ಟ್​ ಧೂಳ್ ಎಬ್ಬಿಸಲಿದೆ.

ಪೊಗರು ಚಿತ್ರತಂಡವೂ ಕೂಡ ಕಳೆದ ವಾರ ದಾವಣಗೇರೆಯಲ್ಲಿ ಆಡಿಯೋ ಲಾಂಚ್​ ಕಾರ್ಯಕ್ರಮವನ್ನು ಆಯೋಜಿಸಿ ಭರ್ಜರಿ ಮುನ್ನುಡಿ ಬರೆದಿತ್ತು. ಇದೇ ರೀತಿ ರಾಬರ್ಟ್​ ಚಿತ್ರತಂಡವೂ ಸಿನಿಮಾಕ್ಕೆ ವ್ಯಾಪಕವಾದ ಪ್ರಚಾರ ಕೊಡಲು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇನ್ನು ಈ ಕಾರ್ಯಕ್ರಮವನ್ನು ಈ ಮೊದಲು ಕಲಬುರ್ಗಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಹುಬ್ಬಳ್ಳಿಯಲ್ಲೇ ನಡೆಸಲು ತೀರ್ಮಾನಿಸಲಾಗಿದೆ.

Comments