ಮೋದಿಯನ್ನು ಪ್ರತಿನಿಧಿಸುವ ವಕೀಲರು ಸಲ್ಲಿಸಿದ ಅರ್ಜಿಯ ನಂತರ, 2002 ರ ಗಲಭೆಗೆ ಬಲಿಯಾದವರ ಸಂಬಂಧಿಕರು ಸಲ್ಲಿಸಿದ ಮೂರು ಸಿವಿಲ್ ಸೂಟ್ಗಳಿಂದ ಪ್ರತಿವಾದಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ತೆಗೆದುಹಾಕಬೇಕೆಂದು ಸಬರ್ಕಂತ ಜಿಲ್ಲೆಯ ತಾಲ್ಲೂಕು ನ್ಯಾಯಾಲಯ ಶನಿವಾರ ನಿರ್ದೇಶಿಸಿದೆ.
ಮೂರು ಸೂಟ್ಗಳಲ್ಲಿ (ಕೇಸ್ಗಳು) ಮೋದಿಯವರನ್ನು ಪ್ರತಿವಾದಿಯಾಗಿ ತೆಗೆದುಹಾಕುವ ಈ ನಿರ್ಧಾರಕ್ಕೆ ಪ್ರಂತೀಜ್ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಕೆ. ಗಾದ್ವಿ ಆದೇಶ ನೀಡಿದ್ದಾರೆ. ಇದೇ ವೇಳೆ ಪರಿಹಾರಕ್ಕಾಗಿ ಸಿವಿಲ್ ಮೊಕದ್ದಮೆಗಳನ್ನು ಸಂತ್ರಸ್ತರ ಸಂಬಂಧಿಗಳಾದ ಶಿರಿನ್ ದಾವೂದ್, ಶಮಿಮಾ ದಾವೂದ್ (ಇಬ್ಬರೂ ಬ್ರಿಟಿಷ್ ಪ್ರಜೆಗಳು) ಮತ್ತು ಇಮ್ರಾನ್ ಸಲೀಮ್ ದಾವೂದ್ ಸಲ್ಲಿಸಿದ್ದಾರೆ.ಮೋದಿಯವರಲ್ಲದೆ, ಮೊಕದ್ದಮೆಯ ಭಾಗವಾಗಿ ಸೇರ್ಪಡೆಯಾದ ಇತರ ಆರೋಪಿಗಳಲ್ಲಿ ವಿಶೇಷ ನ್ಯಾಯಾಲಯವು ಅಂತಿಮವಾಗಿ ಗುಜರಾತ್ನ ಮಾಜಿ ಗೃಹ ಸಚಿವ ಗೋರ್ಧನ್ ಜಡಾಫಿಯಾ, ದಿವಂಗತ ಡಿಜಿಪಿ ಕೆ ಚಕ್ರವರ್ತಿ, ಗೃಹ ಇಲಾಖೆಯ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಶೋಕ್ ನಾರಾಯಣ್, ದಿವಂಗತ ಐಪಿಎಸ್ ಅಧಿಕಾರಿ ಅಮಿತಾಬ್ ಪಾಠಕ್, ಆಗ ಇನ್ಸ್ಪೆಕ್ಟರ್ ಡಿ.ಕೆ.ವಾನಿಕರ್ ಖುಲಾಸೆಗೊಳಿಸಿದೆ. ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಕೃತ್ಯ ನಡೆದ ಸ್ಥಳದಲ್ಲಿ ಹಾಜರಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿರುವ ಕೋರ್ಟ್, ಮೊಕದ್ದಮೆಗಳಿಂದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ತೆಗೆದು ಹಾಕಿದೆ.