ಮತ್ತೊಂದು ಮಹತ್ವದ ಖಡಕ್ ನಿರ್ಧಾರ ಕೈಗೊಂಡ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಬೆಚ್ಚಿಬಿದ್ದ ಪತಾಕಿಗಳು

ಸಮಾಜಘಾತುಕ ಶಕ್ತಿಗಳನ್ನು ದಮನ ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಗ್ಯಾಂಗ್ ಸ್ಟರ್, ಶಾಸಕ ಮುಖ್ತಾರ್ ಅನ್ಸಾರಿ ಸಹಚರರನ್ನು ಕೆಲ ದಿನಗಳ ಹಿಂದೆ ಉತ್ತರಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಇದೀಗ ಅಕ್ರಮವಾಗಿ ನಿರ್ಮಿಸಲಾಗಿದ್ದ ಅನ್ಸಾರಿಗೆ ಸೇರಿದ ಮನೆಯನ್ನು ಕೆಡವಲಾಗಿದೆ.

ಲಖೌನ್ ದ ದಾಲಿಭಾಗ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯನ್ನು ಜೆಸಿಬಿ ಬಳಿಸಿ ನೆಮಸಮ ಮಾಡಲಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಹಮ್ಮದಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ರನ್ನು 2005ರ ನವೆಂಬರ್ 29ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಮುಖ್ತಾರ್ ಅನ್ಸಾರಿ ಸದ್ಯ ಜೈಲು ಸೇರಿದ್ದಾರೆ.