ಈ ವೈದ್ಯೆ ಪಿಪಿಇ ಕಿಟ್ ತೆಗೆಯುತ್ತಿದ್ದಂತೆ ಹೊರಚೆಲ್ಲಿತು ಬಕೆಟ್ ನಷ್ಟು ನೀರು ಅದ್ರೆ ಇದು ನೀರಲ್ಲ ವಿಡಿಯೋ ವೈರಲ್

ಜಗತ್ತಿಗೆ ಕೊವಿಡ್​-19 ಕಾಲಿಟ್ಟಾಗಿನಿಂದ ವೈದ್ಯರು, ನರ್ಸ್​ಗಳು ಸೇರಿ ಮೆಡಿಕಲ್​ ಸಿಬ್ಬಂದಿಯ ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ ಕೊವಿಡ್-19ರೋಗಿಗಳಿಗೆ ಚಿಕಿತ್ಸೆ ನೀಡುವ ಅವರು, ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಿಪಿಇ ಕಿಟ್ ಧರಿಸುತ್ತಾರೆ. ಆದರೆ ಪಿಪಿಇ ಕಿಟ್​​ನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವೂ ಇದೆ. ಸತತ 10-12 ತಾಸು..ಒಮ್ಮೊಮ್ಮೆ ಅದಕ್ಕಿಂತಲೂ ಹೆಚ್ಚು ಕಾಲ ಈ ಸ್ವಯಂ ಸುರಕ್ಷತಾ ಕಿಟ್​, ಕೈಗವಸು, ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಇರಬೇಕಾಗಿರುವುದರಿಂದ ಅವರೆಲ್ಲ ತೀವ್ರವಾಗಿ ಕಷ್ಟಪಡುತ್ತಿದ್ದಾರೆ.

ಅದರಲ್ಲೂ ಈಗೊಂದು ವಿಡಿಯೋ ವೈರಲ್​ ಆಗುತ್ತಿದ್ದು, ಅದನ್ನು ನೋಡಿದರೆ ಪಿಪಿಇ ಕಿಟ್​​ನಿಂದ ವೈದ್ಯರು, ನರ್ಸ್​ಗಳೆಲ್ಲ ಅದೆಷ್ಟು ಹಿಂಸೆ ಅನುಭವಿಸುತ್ತಿದ್ದಾರೆಂಬುದು ಗೊತ್ತಾಗುತ್ತದೆ. ಚೀನಾದ ವೈದ್ಯೆಯೊಬ್ಬರು ತಮ್ಮ ಡ್ಯೂಟಿ ಮುಗಿಸಿ, ಪಿಪಿಇ ಕಿಟ್​ ತೆಗೆಯುತ್ತಿದ್ದಂತೆ ಅವರ ಮೈಯಿಂದ ಬಕೆಟ್​​ಗಳಷ್ಟು ನೀರು ಚೆಲ್ಲುತ್ತದೆ. ಆದರೆ ಅದು ನೀರಲ್ಲ…ಅವರ ಬೆವರು…!

ವೈದ್ಯೆ ತನ್ನ ಪಿಪಿಇ ಪ್ಯಾಂಟ್​ನ್ನು ತೆಗೆಯುತ್ತಾರೆ. ಜತೆಗೆ ಪಾದಗಳಿಗೆ ಹಾಕಿಕೊಂಡಿದ್ದ ಪ್ಲಾಸ್ಟಿಕ್​ ಕವರ್​​​ನ್ನು ಕಳಚುತ್ತಿದ್ದಂತೆ ಅವುಗಳಿಂದ ಬೆವರು, ನೆಲದ ಮೇಲೆ ಚೆಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಆಗಸ್ಟ್​ 8ರಂದು ಉರುಂಕ್ವಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.