ಗೆಳೆಯನ ರಕ್ಷಣೆಗೆ ನೀರಿಗೆ ಧಾವಿಸಿದ ಮರಿಯಾನೆ ಮಾಡಿದ್ದೇನು ಗೊತ್ತಾ ವೈರಲ್ ವಿಡಿಯೋ

ಬ್ಯಾಂಕಾಕ್,  ನೀರಿನಲ್ಲಿ ಮುಳುಗುತ್ತಿದ್ದ ತನ್ನ ಮಾನವ ಗೆಳೆಯನನ್ನು ರಕ್ಷಿಸಲು ಮರಿಯಾನೆಯೊಂದು ನೀರಿನೊಳಕ್ಕೆ ಧಾವಿಸಿ ಬಂದ ಹೃದಯಸ್ಪರ್ಶಿ ಸನ್ನಿವೇಶ ನಡೆದಿದೆ. ನಮ್ಮಲ್ಲಿ ನಮ್ಮ ಪಕ್ಕದ ರಾಜ್ಯವಾದ ಕೇರಳದಲ್ಲಿ ದೇಶವೇ ಆಳಲುತೋಡಿಕೊಂಡ, ಮನಸ್ಸು ಕರಗುವ ಘಟನೆಯೊಂದು ಕೆಲವೇ ದಿನಗಳ ಹಿಂದೆ ನಡೆದಿದೆ ಹಸಿವಿನಿಂದ ಆಹಾರ ಕೇಳಿಕೊಂಡು ಬಂದ ಗರ್ಭಿಣಿ ಆನೆಯೊಂದಕ್ಕೆ ಹಣ್ಣಿನ್ನಲ್ಲಿ ಸ್ಫೋಟಕ ಇಟ್ಟು ಕೊಂದ ವಿಚಿತ್ರ ಘಟನೆಯ ನಡುವೆ ಜಗತ್ತೇ ಮೆಚ್ಚುವ ಈ ಘಟನೆ ಒಂದು ಕಡೆಯಾಗಿದೆ.

ಬ್ಯಾಂಕಾಕ್ ಎಂಬಲ್ಲಿ ಆನೆಯ ಮರಿಯು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮನುಷ್ಯನ ರಕ್ಷಣೆ ಮಾಡಿದ್ದು ಜಗತ್ತೇ ಮೆಚ್ಚಿಕೊಂಡಿದೆ. ಅಷ್ಟಕ್ಕೂ ಪ್ರಾಣಿಗಳು ಮನುಷ್ಯ ಎಷ್ಟು ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಅದಕ್ಕಿಂತ ಎರಡು ಪಟ್ಟು ಪ್ರೀತಿ ಮನುಷ್ಯನಿಗೆ ಈ ಆನೆಗಳು ನೀಡುತ್ತವೆ, ಮನುಷ್ಯನಿಗೆ ಇನ್ನೊಬ್ಬ ಮನುಷ್ಯ ಕೇಡು ಬಗೆದರು ಪ್ರಾಣಿಗಳು ಎಂದಿಗೂ ಕೇಡು ಬಗೆಯದು ಅಷ್ಟು ನಿಯತ್ತಿನಿಂದ ಇರುವಂತದ್ದು. ಆದರೆ ಮನುಷ್ಯನ ದೂರಲೋಚನೆಯಿಂದ ಕೆಲವು ಪ್ರಾಣಿ ಸಂತತಿಗಳನ್ನೇ ವಿಚಿತ್ರವಾಗಿ ನಾಶ ಮಾಡುವ ಮನುಷ್ಯರ ವರ್ಗ ಈ ಸಮಾಜದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆನೆಯು ಮನುಷ್ಯನನ್ನು ಕಾಪಾಡಿದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದ್ದು ಸುಮಾರು 22 ಲಕ್ಷ ಜನರು ಈ ಆನೆಯ ವಿಡಿಯೋ ಗೆ ಲೈಕ್ ಮಾಡಿದ್ದಾರೆ. ಎಲ್ಲರೂ ಕೊಂಡಾಡುವ, ಮೆಚ್ಚುವಂತಹ  ಕೆಲಸ ಮಾಡಿದೆ ,  ಆನೆ ನೀರಿನಲ್ಲಿ ಸುಲಭವಾಗಿ ಈಜಬಲ್ಲ ಪ್ರಾಣಿ ಆಗಿರುವುದರಿಂದ ನೀರಿಗೆ ಇಳಿದು ಆನೆ ಮರಿ ಮನುಷ್ಯನನ್ನು ದಡ ಸೇರಿಸಲು ಸಹಾಯವಾಯಿತು. ಈ ಆನೆಯ ಮರಿಯ ಸಾಹಸಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.