ರಾಷ್ಟ್ರದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಅಜಿತ್ ಹನುಮಕ್ಕನವರ್ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ವಿಚಾರಗಳು ಇಲ್ಲಿದೆ ನೋಡಿ!

ಸುವರ್ಣ ನ್ಯೂಸ್ ನಿರೂಪರ ಅಜಿತ್ ಹನುಮಕ್ಕನವರ್ ಈಗ ಫುಲ್ ಫೇಮಸ್! ರಾಷ್ಟ್ರದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಅಜಿತ್ ಈಗ ರಾಷ್ಟ್ರಭಕ್ತರ ಫೇವರೇಟ್ಮಾಧ್ಯಮಗಳೆಂದರೆ ಇತ್ತೀಚೆನ ದಿನಗಳಲ್ಲಿ ಜಾಹೀರಾತುಗಳಿಗೆ ಜೋತು ಬಿದ್ದು ಇಲ್ಲಸಲ್ಲದ ಸುದ್ಧಿಗಳನ್ನೇ ಪ್ರಕಟಿಸಿ ಅದನ್ನೇ ದಿನವಿಡೀ ಬೊಬ್ಬಿಟ್ಟು ಕಾಲ ಕಳೆಯುವ ಚಾನೆಲ್‍ಗಳು ಎಂಬಂತಾಗಿದೆ. ಹಣಕ್ಕಾಗಿ, ಟಿಆರ್‍ಪಿಗಾಗಿ ತನ್ನ ತನವನ್ನೇ ಮಾರಿ ಸಮಾಜವನ್ನು ತಿದ್ದುವ ಪವಿತ್ರವಾದ ಸ್ಥಾನದಲ್ಲಿದ್ದುಕೊಂಡು ಅವ್ಯವಹಾರಗಳನ್ನು ಮಾಡಿದ್ದೇ ಹೆಚ್ಚು ಸುದ್ಧಿಯಾಗುತ್ತಿವೆ. ಆದರೆ ಅನೇಕ ಮಂದಿ ತನ್ನ ವೃತ್ತಿಯೊಂದಿಗೆ ದೇಶಪ್ರೇಮವನ್ನೂ ಮೆರೆಯುವ ಮಾಧ್ಯಮಗಳ ನಿರೂಪಕರೂ ನಮ್ಮಲ್ಲಿ ಇದ್ದಾರೆ. ಅಂತವರಲ್ಲಿ ಪ್ರಮುಖವಾಗಿರುವವರು ಸುವರ್ಣ ನ್ಯೂಸ್ ಎಂಬ ಕನ್ನಡ ಸುದ್ಧಿ ವಾಹಿನಿಯ ನಿರೂಪಕ ಅಜಿತ್ ಹನಮಕ್ಕನವರ್. ಹೌದು, ಇತ್ತೀಚೆಗೆ ಅಜಿತ್ ಹನುಮಕ್ಕನರ್ ಎಂಬ ಸುವರ್ಣ ನ್ಯೂಸ್ ನಿರೂಪಕ ಹೆಚ್ಚು ಹೆಚ್ಚು ಸುದ್ಧಿಯಾಗುತ್ತಿದ್ದಾರೆ. 

ಒಂದು ಹಂತದಲ್ಲಿ ಅವರನ್ನು ಕರ್ನಾಟಕದ ಅರ್ನಬ್ ಗೋಸ್ವಾಮಿ ಎಂದೂ ಕರೆಯುತ್ತಾರೆ. ತನ್ನ ಮೊಣಚು ಮಾತುಗಳಿಂದ ಎದುರಿಗಿರುವ ಚರ್ಚಾಳುಗಳನ್ನು ಹೆಡೆಮುರಿ ಕಟ್ಟುವ ಹಾಗೂ ಚರ್ಚೆಗೆ ಕುಂತವರೇ ತಬ್ಬಿಬ್ಬಾಗುವ ಪ್ರಶ್ನೆಗಳನ್ನು ಕೇಳಿ ದಿಗ್ಭ್ರಮೆ ಹುಟ್ಟಿಸಿದವರು ಅಜಿತ್ ಹನುಮಕ್ಕನವರ್. ಕಳೆದೆರಡು ದಿನದ ಹಿಂದೆ ನಡೆದ ಚರ್ಚೆಯಲ್ಲಿ ವಕೀಲ ಬಾಲನ್ ‘ಭಾರತ್ ಮಾತಾಕಿ ಜೈ’ ಎನ್ನುವುದು ಸಂವಿಧಾನದಲ್ಲಿಲ್ಲ ಎಂಬ ಹೇಳಿಕೆಗೆ ‘Shut up ಬಾಲನ್ ಗೆಟ್ ಔಟ್ ಆಫ್ ಮೌ ಶೋ’ ಎಂದು ಹೇಳುವ ಮೂಲಕ ಪ್ಯಾನಲ್‌ ನಿಂದ ಬಾಲನ್ ನನ್ನು ಹೊರಹಾಕಿದ್ದಾರೆ. ಅಂದಹಾಗೆ ಇತ್ತೀಚೆಗೆ ಅಜಿತ್ ತುಂಬಾನೆ ಸುದ್ಧಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಅಜಿತ್ ಹನುಮಕ್ಕನವರ್ ಎಂಬ ಸುವರ್ಣ ನ್ಯೂಸ್ ನಿರೂಪಕ ಹೆಚ್ಚಾಗಿ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಯಾವುದೇ ಒಂದು ಪಕ್ಷವನ್ನು ಅಥವಾ ಯಾವುದೇ ಒಂದು ಧರ್ಮವನ್ನು ಅವರು ಓಲೈಸಿಕೊಂಡು ಮಾತನಾಡಲ್ಲ. ಬದಲಾಗಿ ಸತ್ಯ ಯಾವುದಿದೆಯೋ ಅದನ್ನು ಕಡ್ಡಿ ಮುರಿದಂತೆ ಹೇಳುವ ಜಾಯಮಾನ ಅಜಿತ್‍ರದ್ದು.

ಈ ಹಿಂದೆ ಅಜಿತ್ ಬಹಳ ಸುದ್ಧಿಯಾಗಿದ್ದು ಅವರು ಸೈನ್ಯದ ಬಗ್ಗೆ ಆಡಿದ್ದ ಆ ಮಾತುಗಳು. ಅಂದು ಚರ್ಚೆಗೆ ಅನೇಕ ಮಂದಿ ಕುಳಿತಿದ್ದರು. ಅಂದು ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಎಸೆಯುವ ಕುರಿತು ಚರ್ಚೆ ನಡೆಯುತ್ತಿತ್ತು. ಪ್ರತ್ಯೇಕವಾದಿಗಳನ್ನು ಸಮರ್ಥಿಸಿಕೊಳ್ಳಲು ಓರ್ವ ವ್ಯಕ್ತಿಯೂ ಅಲ್ಲಿ ಕುಳಿತಿದ್ದ. ಆದರೆ ಅಜಿತ್ ಹನುಮಕ್ಕನರ್ ಅವರ ಅಂದಿನ ಬೆಂಕಿಯಂತಹಾ ಮಾತಿಗೆ ಸ್ವತಃ ಅಲ್ಲಿ ಕುಳಿತಿದ್ದ ಚರ್ಚಾಳುಗಳೇ ದಂಗಾಗಿದ್ದರು. ಸೈನಿಕರ ಮೇಲೆ ಕಲ್ಲೆಸೆಯುವ ದೇಶದ್ರೋಹಿಗಳನ್ನು ಸೈನಿಕರು ತಮ್ಮ ಜೀಪು ಹತ್ತಿಸಿದ್ದನ್ನು ಸಮರ್ಥಿಸಿಕೊಂಡಿದ್ದರು. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಇದನ್ನು ಸಮರ್ಥಿಸಿದ್ದ ಅಜಿತ್, “ಸೈನಿಕರ ಮೇಲೆ ಕಲ್ಲು ಎಸೆಯುವ ದೇಶದ್ರೋಹಿಗಳ ಮೇಲೆ ಜೀಪು ಹತ್ತಿಸುವುದನ್ನು ನಾನು ಖಂಡಿಸುತ್ತೇನೆ. ದೇಶ ಸೇವೆಗಾಗಿ ತಮ್ಮ ಪ್ರಾಣವನ್ನೇ ನೀಡುವ ಸೈನಿಕರತ್ತ ಕಲ್ಲು ಎಸೆದವರ ಮೇಲೆ ಜೀಪು ಹತ್ತಿಸುವ ಬದಲು ಯುದ್ಧ ಟ್ಯಾಂಕರ್‍ಗಳನ್ನೇ ಹತ್ತಿಸಬೇಕು” ಎಂದು ಖಾರವಾಗಿ ನುಡಿದಿದ್ದರು. ಅಜಿತ್ ಹನುಮಕ್ಕನರ್ ಅವರ ಇಂತಹಾ ಮಾತುಗಳು ದೇಶಪ್ರೇಮಿಗಳಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಸುದ್ಧಿ ಮಾಧ್ಯಮಗಳ ನಿರೂಪಕರೂ ಹಿಂಗೂ ಇರ್ತಾರಾ ಎಂಬ ಅಚ್ಚರಿ ಮೂಡಿತ್ತು. ಯಾವುದೇ ಮುಲಾಜಿಗೂ ಒಳಗಾಗದೆ ದೇಶಪ್ರೇಮದ ಮಾತುಗಳನ್ನಾಡಿದ್ದರು ಅಜಿತ್ ಹನುಮಕ್ಕನರ್.

ಇದೀಗ ಮತ್ತೊಂದು ಹೇಳಿಕೆಯ ಮೂಲಕ ಅಜಿತ್ ಮನೆಮಾತಾಗಿದ್ದಾರೆ. ಅದು ಇತ್ತೀಚೆಗೆ ನಡೆದ ಒಂದು ಚರ್ಚಾ ಕಾರ್ಯಕ್ರಮ. ಈ ಚರ್ಚಾ ಕಾರ್ಯಕ್ರಮದಲ್ಲೂ ವಿವಿಧ ರಾಜಕೀಯ ಹಾಗೂ ಸಾಮಾಜಿಕ ವ್ಯಕ್ತಿಗಳು ಭಾಗಹಿಸಿದ್ದರು. ಚರ್ಚಾ ವಿಷಯ ಅಸ್ಸಾಂನಲ್ಲಿ ಬಾಂಗ್ಲಾ, ಪಾಕಿಸ್ಥಾನ ಸಹಿತ ವಿದೇಶೀ ವಲಸಿಗರನ್ನು ಗಡಿಪಾರು ಮಾಡುವ ಅಲ್ಲಿನ ಸರ್ಕಾರದ ನಿಲುವಿನ ಬಗ್ಗೆಯಾಗಿತ್ತು. ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದರೆ ಮತ್ತೆ ಕೆಲವರು ಈ ಕ್ರಮವನ್ನು ವಿರೋಧಿಸಿದ್ದರು. ಈ ವೇಳೆ ಅಜಿತ್ ಹನುಮಕ್ಕನವರ್ ನೇರವಾಗಿ ವಿದೇಶೀ ವಲಸಿಗರನ್ನು ಝಾಡಿಸುತ್ತಾರೆ. “ವಿದೇಶದಲ್ಲಿ ಇರುವ ಹಿಂದೂಗಳಿಗೆ ತೊಂದರೆಯಾದರೆ ಅವರಿಗೆ ಅಲ್ಲಿ ನೆಲೆಸಲು ಬೇರೆ ದಾರಿ ಇಲ್ಲದಿದ್ದರೆ ಅವರಿಗೆ ಉಳಿದಿರುವುದು ಭಾರತ ಮಾತ್ರ. ನಿಲುವುಗಳನ್ನು ಹೇಳಿಕೊಳ್ಳುವಲ್ಲಿ ನನಗೆ ಯಾವುದೇ ಮುಜುಗರವಿಲ್ಲ. 1947ರಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದಿದ್ದಕ್ಕೆ ಅಖಂಡ ಭಾರತವನ್ನು ಒಡೆದು ಹೊರಗೆ ಹೋಗಿದ್ದಾರೆ. ಹಾಗೆ ಹೋದವರು ಕಷ್ಟನೋ ಸುಖನೋ, ಸ್ವರ್ಗನೋ ನರಕನೋ ಅಲ್ಲೇ ಬದುಕಲಿ. ಮತ್ಯಾಕೆ ಭಾರತಕ್ಕೆ ಬರಬೇಕು? ಇದು ಆರ್.ಎಸ್.ಎಸ್. ಅಜೆಂಡನೋ ಅಥವಾ ಬಿಜೆಪಿ ಅಜೆಂಡನೋ ಅಥವಾ ಕಮ್ಯುನಿಸ್ಟ್-ಕಾಂಗ್ರೆಸ್ ಅಜೆಂಡನೋ ಐ ಡೋಂಟ್ ಕೇರ್. ಇದು ನನ್ನ ನಿಲುವು. ಈ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದಿದ್ದೀರಿ, ನಿಮಗೆ ಇನ್ನೊಂದು ದೇಶ ಬೇಕೆಂದು ಈ ದೇಶವನ್ನು ಒಡೆದು ಹೋಗಿದ್ದೀರಿ ಎಂದಾದರೆ ಅಲ್ಲೇ ಬಿದ್ದು ಸಾಯಿರಿ. ನೀವು ಸೃಷ್ಟಿಸಿಕೊಂಡಿರುವ ನರಕ ಅದು. ನೀವೇ ಸೃಷ್ಟಿಮಾಡಿಕೊಂಡಿರುವ ಬಾಂಗ್ಲಾದೇಶದಲ್ಲಿ ನಿಮಗೆ ಸುಖ ಇಲ್ಲ, ಮತ್ತೆ ಭಾರತಕ್ಕೆ ಬರ್ತೇವೆ ಎನ್ನೋದಾದರೆ ಎದೆಗೆ ಕಾಲು ಇಡಲೇ ಬೇಕಾಗುತ್ತದೆ” ಎಂಬ ಬೆಂಕಿಯಂತಹಾ ಮಾತುಗಳನ್ನಾಡಿದ್ದರು ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್.

ಕೆಲವು ಮಾಧ್ಯಮಗಳು ಒಂದು ಪಕ್ಷದ ಪರವಾಗಿ ಮಾತನಾಡಿದ್ರೆ ಮತ್ತೆ ಕೆಲ ಮಾಧ್ಯಮಗಳು ಮತ್ತೊಂದು ಪಕ್ಷದ ಪರವಾಗಿ ಮಾತನಾಡುತ್ತವೆ. ಆದರೆ ಯಾವುದೇ ಪಕ್ಷದ ಪರವಾಗಿ ಮಾತನಾಡದೆ, ದೇಶದ ವಿಚಾರದಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳದೆ, ದೇಶದ್ರೋಹಿಗಳನ್ನು ನೇರಾನೇರವಾಗಿ ಖಂಡಿಸುವ ತಾಕತ್ತು ಇರೋದು ಕಟ್ಟರ್ ದೇಶಪ್ರೇಮಿಗಳಿಗೆ ಮಾತ್ರ. ತನ್ನ ದೇಶಪ್ರೇಮದ ಸಿದ್ಧಾಂತದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್ ನಿಜಕ್ಕೂ ಗ್ರೇಟ್ ಎನಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅಜಿತ್ ಸಖತ್ತಾಗಿ ಸದ್ದು ಮಾಡುತ್ತಿದ್ದುದು ಇವರ ಹೇಳಿಕೆಗಳ ತುಣುಕುಗಳು ತುಂಬಾನೇ ವೈರಲ್ ಆಗುತ್ತಿವೆ.

-Sunil Panapila
NOTE : ಪೋಸ್ಟ್ ಕಾರ್ಡ್ ನಲ್ಲಿ ಈ ಹಿಂದೆ ಪ್ರಕಟವಾದ ಲೇಖನವನ್ನು ನಕಲು ಮಾಡಲಾಗಿದೆ