ನಾನಿನ್ನು ಮನೆಗೆ ಹೋಗಲೇ ಎಂದು ಮಾವುತ ಕೇಳಿದ್ದಕ್ಕೆ ಸಾಕಿದ ಆನೆ ಸ್ಪಂದಿಸಿದ ರೀತಿ ನೋಡಿ!

ಆನೆ ಎಷ್ಟು ನಿಯತ್ತು ನೀಡುತ್ತೆ ಎಂದರೆ ಅದಕ್ಕೆ ಈ ಘಟನೆಯೇ ಸಾಕ್ಷಿ, ಕೇರಳದಲ್ಲಿ ಒಂದು ಕಡೆ ಹಸಿದ ಆನೆಗೆ ಹಣ್ಣಿಣ್ಣಲ್ಲಿ ಸ್ಫೋಟಕ ಇಟ್ಟು ಕೊಂಡ ದೃಶ್ಯ ನಮ್ಮ ಕಣ್ಣಿನ ಮುಂದೆ ಇನ್ನೊಂದು ಕಡೆ ಆನೆಯ ನಿಯತ್ತು ತೋರಿಸುವ ಅದೇ ಕೇರಳದ ದೇವಸ್ಥಾನದ ಆನೆ ಮಾವುತನಿಗೆ ತನ್ನ ಬುದ್ಧಿಯನ್ನು ತೋರ್ಪಡಿಸುವ ಈ ವಿಡಿಯೋ ಜಗತ್ತಿನಾದ್ಯಂತ ಪ್ರಶಂಸೆಗೆ ವ್ಯಕ್ತವಾಗುತ್ತಿದೆ. ಕೇರಳದ ದೇವಸ್ಥಾನ ಒಂದರ ಆನೆಯು ತನ್ನನ್ನು ಸಾಕಿ ಸಲಹುತ್ತಿರುವ ಮಾವುತನ ಮಾತಿಗೆ ಯಾವ ರೀತಿ ಗೌರವ ಕೊಟ್ಟು ಮಾವುತನ ಮಾತಿಗೆ ಸ್ಪಂದಿಸುತ್ತೇ ಎಂಬುದು ಇಲ್ಲಿದೆ ನೋಡಿ.

ಆನೆಯ ಮಾವುತ ನಾನು ಇನ್ನೂ ಮನೆಗೆ ಹೋಗಬಹುದೇ ಎಂದು ಆನೆಯ ಬಳಿ ಕೇಳಿದಾಗ ಆತನನ್ನು ಬಿಟ್ಟ ಕೊಡಲು ಆನೆಯು ಸಿದ್ಧವಿರಲಿಲ್ಲಾ ಏಕೆಂದರೆ ಅಷ್ಟು ಪ್ರೀತಿಯಿಂದ ಆನೆಯನ್ನು ಆ ಮಾವುತ ನೋಡಿಕೊಂಡಿದ್ದಾನೆ ಅಷ್ಟೇ ಅಲ್ಲದೆ ಮಾವುತನನ್ನು ಅದು ಎಷ್ಟು ನಿಯತ್ತು ಮತ್ತು ಪ್ರೀತಿಯಿಂದ ನೋಡುತ್ತಿತ್ತು ಎಂದರೆ ಮಾವುತ ಆನೆಯನ್ನು ಬಿಟ್ಟು ಮನೆಗೆ ಹೋಗುತ್ತೇನೆ ಎಂದು ಆನೆಯನ್ನು ಬಿಗಿದಪ್ಪಿ ಮುತ್ತಿಕ್ಕುವ ಸುಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.