ರಾತ್ರೋರಾತ್ರಿ ಸೇನೆಯಿಂದ ನಡೆಯಿತು ಬಾರೀ ಆಪರೇಶನ್ : ಬೆಚ್ಚಿಬೀಳಿಸುವ ವೀಡಿಯೋ.!

ಭಾನುವಾರ ರಾತ್ರಿಯಷ್ಟೇ ನಾಲ್ಕು ಉಗ್ರರನ್ನು ಎನ್‌ಕೌಂಟರ್‌ ಮಾಡಿದ್ದ ಭದ್ರತಾ ಪಡೆಗಳು, ಸೋಮವಾರ ಬೆಳಗ್ಗೆ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಈ ಮೂಲಕ ಗಡಿಯಲ್ಲಿ ಉಗ್ರರ ಉಪಟಳವನ್ನು ಸಮರ್ಥವಾಗಿ ಭದ್ರತಾ ಪಡೆಗಳು ಎದುರಿಸುತ್ತಿವೆ.

ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕ್ವಾಜಿಗಂಡ್‌ನ ಲೋವರ್‌ ಮುಂಡಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರು ಎನ್‌ಕೌಂಟರ್‌ ಆಗಿದ್ದಾರೆ. ಇದುವರೆಗೂ ಮೃತ ಉಗ್ರರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ ಸಂಜೆಯಿಂದ ಉಗ್ರರಿಗಾಗಿ ಸರ್ಚ್‌ ಮತ್ತು ಕಾರ್ಡಾನ್‌ ಕಾರ್ಯಾಚರಣೆ ನಡೆಯುತ್ತಿದೆ. ಭಾರತೀಯ ಸೇನೆ , ಸಿಆರ್‌ಪಿಎಫ್‌ ಹಾಗೂ ಪೊಲೀಸರಿಂದ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಖಚಿತ ಮಾಹಿತಿಯೊಂದಿಗೆ ಉಗ್ರರು ಇರುವ ಸ್ಥಳ ಖಚಿತಪಡಿಸಿಕೊಂಡು, ಅಲ್ಲಿಗೆ ತೆರಳಿದ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಎನ್‌ಕೌಂಟರ್‌ ಮಾಡಲು ಯಶಸ್ವಿಯಾಗಿವೆ. ಭಾನುವಾರ ರಾತ್ರಿಯಷ್ಟೇ ಕುಲ್ಗಾಂ ಜಿಲ್ಲೆಯ ಗದ್ದರ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು 4 ಉಗ್ರರನ್ನು ಹೊಡೆದುರುಳಿಸಿದ್ದವು.