ವಿಡಿಯೋ: ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯನ್ನು ವಾಯುಪಡೆ ಹೆಲಿಕಾಪ್ಟರ್ ರಕ್ಷಿಸುತ್ತಿರುವ ರೋಚಕ ದೃಶ್ಯ ವೈರಲ್ ವಿಡಿಯೋ

ಛತ್ತೀಸ್​ಗಢದಲ್ಲಿ ಬಿಲಾಸ್​ ಪುರ ಸಮೀಪ ಖುಟಾಘಾಟ್ ಅಣೆಕಟ್ಟು ವ್ಯಾಪ್ತಿಯಲ್ಲಿ ಪ್ರವಾಹದ ನಡುವೆ ಸಿಲುಕಿದ್ದ ವ್ಯಕ್ತಿಯನ್ನು ಭಾರತೀಯ ವಾಯುಪಡೆಯ ಹೆಲಿಕಾಫ್ಟರ್ ಮೂಲಕ ರಕ್ಷಿಸಿದ ರೋಚಕ ವಿಡಿಯೋ ಈಗ ವೈರಲ್ ಆಗಿದೆ.

ತೀವ್ರ ಮಳೆಯ ಕಾರಣಕ್ಕೆ ಅಣೆಕಟ್ಟೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹೆಚ್ಚಿನ ನೀರನ್ನು ಅಣೆಕಟ್ಟೆ ಗೇಟ್ ಓಪನ್ ಮಾಡಿ ಬಿಡಲಾಗಿದೆ. ಇದರಿಂದಾಗಿ ಅಣೆಕಟ್ಟೆಯ ಕೆಳಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ವ್ಯಕ್ತಿಯೊಬ್ಬ ಅದರ ನಡುವೆ ಸಿಲುಕಿದ್ದ. ಮರವೊಂದನ್ನು ಆಶ್ರಯವಾಗಿ ಹಿಡಿದು ನೀರಿನ ಸೆಳೆತದ ನಡುವೆ ಬದುಕುವುದಕ್ಕೆ ಹೋರಾಟ ನಡೆಸುತ್ತಿದ್ದ. ಆತನನ್ನು ಭಾರತೀಯ ವಾಯುಪಡೆ ಹೆಲಿಕಾಫ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆಯನ್ನು ಬಿಲಾಸಪುರ ಪೊಲೀಸರು ಚಿತ್ರೀಕರಿಸಿದ್ದು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕಾರ್ಯಾಚರಣೆ ಮೈನವಿರೇಳಿಸುವಂತೆ ಇದ್ದು, ಬಹಳ ಜನ ವಾಯುಪಡೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.