ವೃದ್ಧೆಯನ್ನೇ ಹಿಂಬಾಲಿಸಿದ ಯುವಕ ಹೀಗಾ ಮಾಡೋದು.? ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಯುವಕನ ಘೋರ ಕೃತ್ಯ

ಸರ ಕಳ್ಳರಿಗೆ ಪಾದಚಾರಿ ಮಹಿಳೆಯರೇ ಟಾರ್ಗೆಟ್​. ಹಾದಿ-ಬೀದೀಲಿ ಹೊಂಚು ಹಾಕುವ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ಕಂಡ ಕೂಡಲೇ ತಾವೂ ದಾರಿಹೋಕರಂತೆ ಅವರನ್ನೇ ಹಿಂಬಾಲಿಸುತ್ತಾರೆ. ಅತ್ತಿರ ಬರುತ್ತಿದ್ದಂತೆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕ್ಷಣಾರ್ಧದಲ್ಲೇ ಸರ ಕಸಿದುಕೊಂಡು ಪರಾರಿಯಾಗ್ತಾರೆ.

ಇದೀಗ 70 ವರ್ಷದ ವೃದ್ಧೆಯ ಚಿನ್ನದ ಸರವನ್ನು ಕಳ್ಳರು ಕಸಿದುಕೊಂಡಿದ್ದು, ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈಸೂರಿನ ಸೋಮನಾಥಪುರದಲ್ಲಿ 70 ವರ್ಷದ ವೃದ್ಧೆ ಶಾಂತಮ್ಮ ವಾಕಿಂಗ್​ ಮಾಡುತ್ತಿದ್ದ ವೇಳೆ ಯುವಕನೊಬ್ಬ ಅವರನ್ನೇ ಹಿಂಬಾಲಿಸಿಕೊಂಡು ಬಂದು ಸರ ಕಸಿದುಕೊಂಡು ಎಸ್ಕೇಪ್​ ಆಗಿದ್ದಾನೆ.

ತನ್ನ ಕೊರಳಿಗೆ ಕೈ ಹಾಕಿ ಸರ ಕಸಿದುಕೊಂಡ ದುಷ್ಕರ್ಮಿಯನ್ನು ಹಿಡಿಯಲು ವೃದ್ಧೆ ಶಾಂತಮ್ಮ ಯತ್ನಿಸಿದರೂ ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲೇ ಅಲ್ಲಿಗೆ ಮತ್ತೊಬ್ಬ ಬೈಕ್‌ನಲ್ಲಿ ಬಂದಿದ್ದಾನೆ‌. ಸರಗಳ್ಳ ಬೈಕ್ ಹತ್ತಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯವೂ ಘಟನೆ ನಡೆದ ಸ್ಥಳದಲ್ಲಿ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.