ಹಾಡಹಗಲೇ ಸಿನಿಮಿಯಾ ರೀತಿಯಲ್ಲಿ ಕಿಡ್ನಾಪ್ ವಿಡಿಯೋ ನೋಡಿ

ಕಿಲಾರಿಪೇಟೆಯ ಶಿವ ಎಂಬ ಯುವಕ ಕೋಲಾರ ನಗರದ ಎಂಬಿ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್​ ಬಳಿ ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕಿಡ್ನಾಪ್​ ಮಾಡಿದ್ದಾನೆ. ಶಿವ ಕಳೆದ ಹಲವು ವರ್ಷಗಳಿಂದ ದೇವಾಂಗಪೇಟೆಯ ಸಿರಿಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಯುವತಿ ಪಾಲಕರು ಇವರಿಬ್ಬರ ಪ್ರೀತಿಗೆ ನಿರಕಾರಿಸಿದ್ದರು. ಆದರೆ ಸಿರಿಶಾಳನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ಶಿವ, ಇನ್ನೋವಾ ಕಾರಿನಲ್ಲಿ ಬಂದು, ಯುವತಿಯನ್ನು ಪಕ್ಕಾ ಸಿನಿಮೀಯ ಸ್ಟೈಲ್​ನಲ್ಲೇ ಅಪಹರಿಸಿದ್ದಾನೆ.