ರಫೇಲ್ ಯುದ್ಧ ವಿಮಾನ ಓಡಿಸಿಕೊಂಡುಬಂದ ಈ ಪೈಲೆಟ್ ಯಾರಂತ ಗೊತ್ತಾದ್ರೆ ಹೆಮ್ಮೆ ಪಡ್ತೀರಾ!!

ವಿಜಯಪುರ: ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸಿರುವ ಐದು ರಾಫೆಲ್ ಯುದ್ಧ ವಿಮಾನಗಳ ಪೈಕಿ ಒಂದು ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದು ಓರ್ವ 'ಹೆಮ್ಮೆಯ ಕನ್ನಡಿಗ'.

ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ರಾಫೆಲ್ ಯುದ್ಧ ವಿಮಾನದ ಆಗಮನ ಪೂರ್ಣವಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಲಟ್ ಗಳ ತಂಡದಲ್ಲಿ ಕರ್ನಾಟಕ ಮೂಲದ ಓರ್ವ ಪೈಲಟ್ ಕೂಡ ಇದ್ದಾರೆ. ಕರ್ನಾಟಕದ ವಿಜಯಪುರ ಮೂಲದ ಸೈನಿಕರೊಬ್ಬರು ಭಾರತಕ್ಕೆ ರಾಫೆಲ್ ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದಾರೆ.

ವಿಜಯಪುರ ಸೈನಿಕ ಶಾಲೆಯಲ್ಲಿ ಅಭ್ಯಾಸ ಪಡೆದ 35 ವರ್ಷದ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್ ಅವರು ರಾಫೆಲ್ ಯುದ್ಧ ವಿಮಾನವನ್ನು ಭಾರತಕ್ಕೆ ಚಲಾಯಿಸಿಕೊಂಡು ಬಂದಿದ್ದಾರೆ.