ಯಡಿಯೂರಪ್ಪ ಸರ್ಕಾರದ ಮತ್ತೋರ್ವ ಪ್ರಭಾವಿ ಸಚಿವನಿಗೆ ಕೊರೊನಾ ಪಾಸಿಟಿವ್.?

ಅರಣ್ಯ ಸಚಿವ, ಹೊಸಪೇಟೆ ಶಾಸಕ ಹಾಗು ಬಳ್ಳಾರಿ ಜಿಲ್ಲೆ ಕೋವಿಡ್ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿದ್ದ ಆನಂದ್ ಸಿಂಗ್ ಅವರಿಗೆ ನಿನ್ನೆ ವರದಿ ಸಿಕ್ಕಿದ್ದು ಕೊರೊನಾ ಇರುವುದು ಖಚಿತವಾಗಿದೆ. ಆದರೆ, ಯಾವ ರೋಗಲಕ್ಷಣವಿಲ್ಲದೆ ಸಚಿವರಿಗೆ ಕೊರೊನಾ ಇರುವುದು ಕಂಡುಬಂದಿದೆ.

ರೋಗಲಕ್ಷಣವಿಲ್ಲದ ಕಾರಣ ಆನಂದ್ ಸಿಂಗ್ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಹೊಸಪೇಟೆ ನಿವಾಸದಲ್ಲಿ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಸಚಿವರು ಆರೋಗ್ಯವಾಗಿದ್ದಾರೆ.

ಅವರಿಗೆ ಕೊರೊನಾ ಸೋಂಕು ತಗುಲಿರುವುದು ನಿಜ. ಅವರು ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೆಂದು ಕುಟುಂಬ ಮೂಲಗಳು ಹೇಳಿದೆ. ಇತ್ತೀಚೆಗೆ ಸಚಿವರ ಕಾರು ಚಾಲಕನಿಗೆ ಕೊರೋನಾ ಕಾಣಿಸಿಕೊಂಡಿತ್ತು.