Featured Post

ಡ್ರೋನ್ ಪ್ರತಾಪ್ ಕುಟುಂಬ ನಿಜವಾಗಿಯೂ ಬಡತನದ ಬೆಗೆಯಲ್ಲಿ ಬೆಯುತಿತ್ತಾ.!ಕನ್ನಡದ ಸುದ್ದಿವಾಹಿನಿ ಬಯಲು ಮಾಡಿದೆ ಅಸಲಿ ಸತ್ಯ.?

ರಾಜ್ಯ ಹಾಗೂ ದೇಶದ್ಯಾಂತ ಕಳೆದ ಎರಡು ವರ್ಷಗಳಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ರ ಸಾಧನೆ ಹಾಗೂ ಅವರು ಪಡೆದುಕೊಂಡಿರುವ ಪ್ರಶಸ್ತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ ಮಾತ್ರವಲ್ಲದೆ ಪರ ಹಾಗೂ ವಿರೋಧದ ಕುರಿತು ಆರೋಗ್ಯಕರ ಚರ್ಚೆ ಏರ್ಪಟ್ಟಿದೆ. ಪ್ರತಿಷ್ಠಿತ ವೆಬ್ ಸೈಟ್ ಗಳಲ್ಲಿ ಒಂದಾದ "ಒಪಿ ಇಂಡಿಯಾ" ಡ್ರೋನ್ ಪ್ರತಾಪ್ ರ ಸಾಧನೆಗಳ ಪ್ಯಾಕ್ಟ್ ಚೆಕ್ ನಡೆಸಿದ್ದು, ಈ ಸಂಧರ್ಭದಲ್ಲಿ ಹಲವಾರು ಅಂಶಗಳು ಬೆಳಕಿಗೆ ಬಂದಿದೆ. ಈ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಆರಂಭಗೊಂಡಿದ್ದು. "ಒಪಿ ಇಂಡಿಯಾ" ಪ್ರಕಟಿಸಿದ ಸುದ್ದಿಯನ್ನು "ಸಿಂಪಲ್ ಸುದ್ದಿ" ಕನ್ನಡದಲ್ಲಿ ಪ್ರಕಟಿಸಿತ್ತು.

ಡ್ರೋನ್ ಪ್ರತಾಪ್ ಈ ಸುದ್ದಿ ಹಾಗೂ ಚರ್ಚೆಗಳ ಕುರಿತು ಇಲ್ಲಿಯವರೆಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲವಾದರೂ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿ ಜನತೆಗೆ ಸತ್ಯಸತ್ಯತೆಯ ಮಾಹಿತಿ ನೀಡುವುದಾಗಿ ಕನ್ನಡದ ಕೆಲವು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಅಂಶಗಳ ನಡುವೆ ಡ್ರೋನ್ ಪ್ರತಾಪ್ ತಮ್ಮ ಬಡತನದ ಬಗ್ಗೆ ಪ್ರತಿ ಸಲ ಹೇಳಿಕೊಂಡಿದ್ದರು. ಸದ್ಯ ಈ ಬಗ್ಗೆ ಕನ್ನಡ ಪ್ರತಿಷ್ಥಿತ ಸುದ್ದಿ ಸಂಸ್ಥೆಯೊಂದು ವರದಿ ಪ್ರಕಟಿಸಿದೆ.

"ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿದ್ದಾನೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್. ಕೆಲ ದಿನಗಳ ಹಿಂದೆ ಈತನ ಸಾಧನೆ ಕುರಿತು ಚರ್ಚೆ ನಡೆದಿತ್ತು. ಈತ ಹಲವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ. ಆತನ ಭಾಷಣಗಳನ್ನು ಯೂಟ್ಯೂಬ್​ನಲ್ಲಿ ಲಕ್ಷಾಂತರ ಜನ ವೀಕ್ಷಿಸಿ, ಶಹಬ್ಬಾಸ್​ಗಿರಿ ಕೊಟ್ಟಿದ್ದರು. ದೇಶಕ್ಕಾಗಿ ದೊಡ್ಡ ಕೊಡುಗೆ ನೀಡುತ್ತಿದ್ದಾನೆ, ಆತನ ದೇಶಪ್ರೇಮ ಎಲ್ಲರಿಗೂ ಮಾದರಿ ಎಂದು ಹಲವರು ಲಕ್ಷಗಟ್ಟಲೇ ಹಣ ಕೊಟ್ಟು ಪ್ರೋತ್ಸಾಹಿಸಿದ್ದರು. ಆದರೆ, ಆತ ಅಸಲಿ ವಿಜ್ಞಾನಿಯೇ ಅಲ್ಲ. ಅಸಲಿಗೆ ಬಿಎಸ್​ಸಿ ಪದವಿಯನ್ನೂ ಪೂರ್ಣಗೊಳಿಸಿಲ್ಲ ಎಂಬ ವಿಚಾರ ಈಗ ಬಯಲಾಗಿದೆ.

'ಮಿಕ್ಸಿಯಲ್ಲಿನ ಮೋಟಾರ್ ಹಾಗೂ ಟಿವಿಯ ಬಿಡಿಭಾಗಗಳನ್ನು ಬಳಸಿ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನ್ನ ಡ್ರೋನ್​ಗೆ 2018ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್​ಸ್ಟೀನ್ ಚಿನ್ನದ ಪದಕ, ಅಂತಾರಾಷ್ಟ್ರೀಯ ಡ್ರೋನ್ ಎಕ್ಸ್​ಪೋದಲ್ಲಿ ಗೋಲ್ಡ್ ಮೆಡಲ್, ಸಿಬಿಟ್​ನಲ್ಲಿ ಮೊದಲ ಬಹುಮಾನ ಬಂದಿದೆ. 2017ರ ಜಪಾನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ರೋಬೋಟಿಕ್ ಪ್ರದರ್ಶನದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ನನಗೆ ಸುಮಾರು 87 ದೇಶಗಳು ಕೆಲಸಕ್ಕೆ ಆಫರ್ ನೀಡಿವೆ.

ಆದರೆ, ನನ್ನ ಸೇವೆ ಏನಿದ್ದರೂ ನನ್ನ ದೇಶಕ್ಕೆ ಮಾತ್ರ' ಎಂದು ಪ್ರತಾಪ್ ಹೇಳುತ್ತಿದ್ದ. ಹಲವು ಬೃಹತ್ ವಿದ್ಯಾಸಂಸ್ಥೆಗಳು ಅಭಿನಂದಿಸಿ, ಆತನ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿ ಸಿದ್ದವು. 'ಜರ್ಮನಿಗೆ ಹೋಗಲು ಹಣ ಇರಲಿಲ್ಲ. ನನ್ನ ತಾಯಿ ತಾಳಿ ಕೊಟ್ಟರು. ನಾನು 300 ಕೆಜಿ ಭಾರವನ್ನು ಡ್ರೋನ್​ನಲ್ಲಿ ಸಾಗಿಸಿದೆ…' ಹೀಗೆ ಕಥೆ ಹೇಳುತ್ತಿದ್ದ ಪ್ರತಾಪ್, ತಾನು ತಯಾರಿಸಿರುವ ಡ್ರೋನ್​ಗಳನ್ನು ಈವರೆಗೆ ಎಲ್ಲಿಯೂ ಪ್ರದರ್ಶನ ಮಾಡಿಲ್ಲ.

ಐಷಾರಾಮಿ ಜೀವನ

'ದೇಶಕ್ಕೆ ಕೊಡುಗೆ ನೀಡಬೇಕೆಂದು ಪಣ ತೊಟ್ಟಿದ್ದೇನೆ' ಎಂದು ಭಾಷಣ ಬಿಗಿಯುತ್ತಿದ್ದ ಪ್ರತಾಪ್​ಗೆ ಹಣ ನೀರಿನಂತೆ ಹರಿದು ಬಂದಿದೆ. ಆತನ ಸಂಶೋಧನೆಗೆ ಸಹಾಯವಾಗಲಿ ಎಂದು ಜನತೆ ಕಣ್ಣುಮುಚ್ಚಿಕೊಂಡು ಹಣ ನೀಡಿದ್ದಾರೆ. ಹಣದ ಹರಿವು ಹೆಚ್ಚಳವಾಗುತ್ತಿದ್ದಂತೆ ಆತ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿ ಮನೆ ಖರೀದಿಸಿದ್ದಾನೆ. ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎನ್ನಲಾಗಿದೆ.

ಬಡತನದ ಬೇಗೆ ಕಟ್ಟುಕಥೆ

ತನ್ನದು ಬಡ ಕುಟುಂಬ. ತಾನು ಬಹಳ ಕಷ್ಟಗಳನ್ನು ಅನುಭವಿಸಿದ್ದಾಗಿ ಪ್ರತಾಪ್ ಈ ಹಿಂದೆ ಹೇಳಿಕೊಂಡಿದ್ದ. ಆದರೆ ವಾಸ್ತವದಲ್ಲಿ ಆತನ ಕುಟುಂಬ ಬಡತನದ ಬೇಗೆಯಲ್ಲೇನು ಬೇಯುತ್ತಿಲ್ಲ. ಪ್ರತಾಪ್ ತಾಯಿಯ ತಂದೆ (ತಾತ) ಸರ್ಕಾರಿ ನೌಕರಿಯಲ್ಲಿದ್ದರು. ಪ್ರತಾಪ್ ದೊಡ್ಡಪ್ಪ ಅಮೆರಿಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದರು. ಅವರ ಪುತ್ರ ಕೋಲ್ಕತ್ತಾದಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದಾರೆ. ಪ್ರತಾಪ್ ತಂದೆ, ತಾಯಿ ರೇಷ್ಮೆ ಬೆಳೆಗಾರರಾಗಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರತಾಪ್ ಮಳವಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾನೆ. ಜೆಎಸ್​ಎಸ್ ಕಾಲೇಜಿನಲ್ಲಿ ಬಿಎಸ್​ಸಿ ವಿದ್ಯಾಭ್ಯಾಸ ಮಾಡುತ್ತಿದ್ದವನಿಗೆ ಹಣ ಮಾಡುವ ಐಡಿಯಾ ಬಂದಿತು. ಸರಿಯಾಗಿ ತರಗತಿಗೆ ಬಾರದ ಈತ ಏನೋ ಸಂಶೋಧನೆ ಮಾಡುತ್ತಿದ್ದಾನೆಂದು ಭಾವಿಸಿ ಉಪನ್ಯಾಸಕರ ಜತೆಗೆ ಮಠದವರು ಕೂಡ ಆರ್ಥಿಕ ನೆರವು ನೀಡಿದ್ದಾರೆ. ಜರ್ಮನಿಯಲ್ಲಿ ಡ್ರೋನ್ ಪ್ರದರ್ಶನ ಮಾಡಲಿಕ್ಕೆ ಜೆಎಸ್​ಎಸ್ ಮಠ 8 ಲಕ್ಷ ರೂ., ವಿದ್ಯಾಸಂಸ್ಥೆಯ ಎಲ್ಲ ಉಪನ್ಯಾಸಕರು ಆರ್ಥಿಕ ನೆರವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನ್ನ ಮಗ ಪ್ರತಾಪ್ ಡ್ರೋನ್ ಸಂಶೋಧನೆ ಮಾಡಿರುವುದು ನಿಜ. ಕೆಲವರು ಬೇಕಂತ ಅಪಪ್ರಚಾರ ಮಾಡುತ್ತಿದ್ದಾರೆ. ಸದ್ಯದಲ್ಲೇ ಆತ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರಲಿದ್ದಾನೆ.

| ಮರಿಮಾದಯ್ಯ ಅಲಿಯಾಸ್ ರಮೇಶ್ ಪ್ರತಾಪ್ ತಂದೆ

ಯಾರಿಗೂ ಡ್ರೋನ್ ತೋರಿಸಿಲ್ಲ

ಅದ್ಭುತವಾದ ಡ್ರೋನ್ ಕಂಡುಹಿಡಿದಿರುವುದಾಗಿ ಹೇಳುವ ಪ್ರತಾಪ್, ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿಲ್ಲ. ನೆರವು ನೀಡಿದ ಮಠದ ಶ್ರೀಗಳು ಸುತ್ತೂರು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ ಹೇಳಿದಾಗ ಅದರ ಪೇಟೆಂಟ್ ಮಿಸ್ ಆಗಿಬಿಡುತ್ತದೆ ಎಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನ ಡ್ರೋನ್ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳನ್ನು ಕೂಡ ಸಂಸ್ಥೆಗಾಗಲಿ, ಮಾಧ್ಯಮಗಳಿಗಾಗಲಿ ಈತನಕ ತೋರಿಸಿಲ್ಲ.

ಕರೆ ಸ್ವೀಕರಿಸುತ್ತಿಲ್ಲ: ಪ್ರತಾಪ್​ನನ್ನು ಸಂರ್ಪಸಲು ವಿಜಯವಾಣಿ ಹಲವು ಬಾರಿ ಮೊಬೈಲ್​ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಡ್ರೋನ್ ಸಂಶೋಧನೆ ನಡೆಸಿರುವುದಾಗಿ ಹೇಳಿರುವ ಎನ್.ಎಂ. ಪ್ರತಾಪ್ ಈಗ ನಮ್ಮ ಸಂಪರ್ಕದಲ್ಲಿಲ್ಲ. ಬಿಎಸ್ಸಿಯಲ್ಲಿ ಎರಡು ವಿಷಯವನ್ನು ಉಳಿಸಿಕೊಂಡಿದ್ದು, ಪದವಿ ಪೂರ್ಣಗೊಂಡಿಲ್ಲ. ಊಟಿ ರಸ್ತೆಯ ಜೆಎಸ್​ಎಸ್ ಕಾಲೇಜಿನಲ್ಲಿ ಆತ ವ್ಯಾಸಂಗ ಮಾಡುತ್ತಿದ್ದ. ಜಪಾನ್​ನಲ್ಲಿ ಭಾಗವಹಿಸಿ ಬಹುಮಾನ ಬಂದಿದೆ, ಜರ್ಮನ್​ಗೆ ಹೋಗಲು ಡ್ರೋನ್ ತಯಾರು ಮಾಡಬೇಕು ನೆರವು ನೀಡುವಂತೆ ಕೇಳಿದ್ದ. ಪ್ರತಿಭೆ ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನಿರ್ದೇಶನದ ಮೇರೆಗೆ ಹಂತ ಹಂತವಾಗಿ ನೆರವು ನೀಡಲಾಯಿತು. ಆದರೆ ಈಗ ಏನಾಗಿದೆ ಎನ್ನುವುದು ಸರಿಯಾಗಿ ನಮಗೆ ಗೊತ್ತಿಲ್ಲ.

| ಪ್ರೊ.ಬಿ.ವಿ.ಸಾಂಬಶಿವಯ್ಯ ಮುಖ್ಯ ಕಾರ್ಯ ನಿರ್ವಾಹಕರು, ಜೆಎಸ್​ಎಸ್ ಕಾಲೇಜು ಮೈಸೂರು

ಪ್ರತಾಪ್ ಮಾತಿನ ಮೂಲಕ ಜನರಿಗೆ ಪಂಗನಾಮ ಹಾಕಿದ್ದಾನೆ. ಮಾತೇ ಅವನ ದೊಡ್ಡ ಸಾಧನೆ. ಡ್ರೋನ್ ಅನ್ನು ಮಠಕ್ಕೆ ತಂದು ತೋರಿಸಿಲ್ಲ. ನೀಡಿದ ಹಣಕ್ಕೆ ಲೆಕ್ಕ ಕೊಟ್ಟಿಲ್ಲ. ಅದನ್ನು ಕೇಳುತ್ತಾರೆಂಬ ಕಾರಣದಿಂದ ಮಠ, ವಿದ್ಯಾಸಂಸ್ಥೆಯತ್ತ ಸುಳಿಯುತ್ತಿಲ್ಲ.

| ಹೆಸರು ಹೇಳಲಿಚ್ಛಿಸದ ಉಪನ್ಯಾಸಕ"

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರನ್ನು ಕೂಡಲೇ ಸಂಪರ್ಕಿಸಲು Call Now ಬಟನ್ ಕ್ಲಿಕ್ ಮಾಡಿ