ಪ್ರಧಾನಿ ಮೋದಿ ಬಳಿಕ ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾದ ರಾಜನಾಥ್ ಸಿಂಗ್, ಚೀನಾಗೆ ನಡುಕ.?

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳ ಕಾಲ ಲಡಾಕ್ ಹಾಗೂ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದು, ಈ ಭೇಟಿ ಮಹತ್ವ ಪಡೆದಿದೆ. ಲಡಾಕ್ ಗೆ ತೆರಳಿರುವ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾಮುಖ್ಯಸ್ಥ ಮುಕುಂದ್ ಮನೋಜ್ ನರವಾಣೆ ಸಾಥ್ ನೀಡಿದ್ದಾರೆ. 

ತಮ್ಮ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್, ದೇಶದ ಗಡಿಯಲ್ಲಿನ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಈ ಪ್ರದೇಶದಲ್ಲಿ ನಿಯೋಜಿಸಲಾದ ಸೇನಾ ಸಿಬ್ಬಂದಿಯ ಜೊತೆ ಮಾತುಕತೆ ನಡೆಸುವುದಾಗಿ ಸ್ಪಷ್ಟಪಡಿಸಿದರು. ಇಂದು ಲಡಾಕ್, ಲೇಹ್ ಭೇಟಿ ಕೈಗೊಳ್ಳಲಿರುವ ರಾಜನಾಥ್ ಸಿಂಗ್ ನಾಳೆ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ