Featured Post

ವೈರಲ್ ವೀಡಿಯೋ: ‘ಚೀನಾದವ್ರು ಯೋಚ್ನೆ ಮಾಡದೇ ಏನೂ ಮಾಡಲ್ಲಾರಿ’- ರಾಹುಲ್ ಗಾಂಧಿ ವಿವರಿಸ್ತಿದ್ದಾರೆ ನೋಡಿ!

ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಇಂದು ಮತ್ತೆ ಒಂದು ವಿಡಿಯೋವನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದ್ದು, ಚೀನಾದ ಟ್ಯಾಕ್ಟಿಕಲ್ ಮತ್ತು ಸ್ಟ್ರಾಟೆಜಿಕ್ ಪ್ಲ್ಯಾನ್ ಏನು ಎಂಬುದರ ವಿವರಣೆಯನ್ನು ಕೊಡುತ್ತ ಹೋಗಿದ್ದಾರೆ. ಅವರು ಹೇಳಿದ್ದಿಷ್ಟು- ಚೀನಾದವರು ಸರಿಯಾಗಿ ಸ್ಟ್ರಾಟೆಜಿಕ್ ಆಗಿ ಚಿಂತನೆ ನಡೆಸದೇ ಏನೂ ಮಾಡಲ್ಲ. (ಹಿನ್ನೆಲೆಯಲ್ಲಿ ಕಂಡದ್ದು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್​). ಮನಸ್ಸಿನಲ್ಲೇ ಅವರು ಎಲ್ಲವನ್ನೂ ಮ್ಯಾಪ್​ ಮಾಡಿಕೊಳ್ಳುತ್ತಾರೆ. ನಂತರ ಅದಕ್ಕೊಂದು ಶೇಪ್ ಕೊಡುತ್ತಾರೆ. ಆ ಪ್ರಮಾಣದಲ್ಲಿ ಅವರು ಕಾರ್ಯ ನಿರ್ವಹಿಸುತ್ತಾರೆ. (ಹಿನ್ನೆಲೆಯಲ್ಲಿ ಪಾಕಿಸ್ತಾನದ ಗ್ವಾದಾರ್ ಕಾಣಿಸಿಕೊಳ್ಳುತ್ತದೆ). ಪಾಕಿಸ್ತಾನದ ಗ್ವಾದಾರ್ ಏನು ಇದೆ ಅದುವೇ ಬೆಲ್ಟ್ ಆ್ಯಂಡ್ ರೋಡ್ ಯೋಜನೆ. ಇದು ಪ್ಲಾನೆಟ್​ನ ರೀಸ್ಟ್ರಕ್ಚರಿಂಗ್​. ಆದ್ದರಿಂದ ನೀವು ಚೀನೀಯರ ಬಗ್ಗೆ ಆಲೋಚಿಸುವಾಗ ಇವನ್ನು ಪರಿಗಣಿಸಿದರೆ ಸಾಕು, ಅವರ ಸಾಮರ್ಥ್ಯ ಏನು ಎಂಬುದು ಅರ್ಥವಾಗುತ್ತದೆ. ಈ ರೀತಿ ಆಲೋಚಿಸಬೇಕು. ಈಗ ಟ್ಯಾಕ್ಟಿಕಲ್ ಲೆವೆಲ್​ನಲ್ಲಿ ನಾವು ನೋಡಿದರೆ, ಅವರು ತಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದ್ದಾರೆ. ಅದು ಗಾಲ್ವಾನ್ ಇರಬಹುದು, ಡೆಮ್ಚೊಕ್​ ಇರಬಹುದು, ಪಾನ್​ಗೊಂಗ್​ ಇರಬಹುದು ಅಲ್ಲೆಲ್ಲ ಅವರು ತಮ್ಮನ್ನು ತಾವು ಪೊಸಿಷನ್​ನಲ್ಲಿ ಇರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಹೆದ್ದಾರಿಯಿಂದ ಡಿಸ್ಟರ್ಬ್​ ಆಗಿದ್ದಾರೆ. ನಮ್ಮ ಹೆದ್ದಾರಿಯನ್ನು ನಾಶಮಾಡಲು ಅವರು ಬಯಸಿದ್ದಾರೆ.

ಒಂದೊಮ್ಮೆ ಅವರು ದೊಡ್ಡ ಪ್ರಮಾಣದಲ್ಲಿ ಏನಾದರೂ ಮಾಡಬೇಕು ಎಂದು ಬಯಸಿದರೆ, ಅವರು ಪಾಕಿಸ್ತಾನದ ಜತೆಗೆ ಸೇರಿ ಅದನ್ನು ಕಾಶ್ಮೀರದಲ್ಲಿ ಮಾಡುತ್ತಾರೆ. ಆದ್ದರಿಂದ ಇದು ಕೇವಲ ಒಂದು ಗಡಿಯ ವಿಚಾರವಲ್ಲ. ಭಾರತದ ಪ್ರಧಾನ ಮಂತ್ರಿಯ ಮೇಲೆ ಒತ್ತಡ ಹೇರುವುದಕ್ಕಾಗಿಯೆ ಸೃಷ್ಟಿಸಿದ ಗಡಿ ಸಮಸ್ಯೆ ಇದು. ಅವರು ಒಂದು ನಿಶ್ಚಿತ ರೀತಿಯಲ್ಲೇ ಒತ್ತಡ ಹೇರುವುದಕ್ಕೆ ಚಿಂತನೆ ನಡೆಸುತ್ತಿದ್ದಾರೆ. ಅದರಂತೆ ಅವರು ದಾಳಿ ನಡೆಸುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ 56 ಇಂಚಿನ ಎದೆಯ ವಿಚಾರ ಚೀನೀಯರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಮೋದಿ ಏನಾದರೂ ಮಾಡಲೇ ಬೇಕಾಗುತ್ತದೆ. ಇದೇ ಕಾರಣಕ್ಕೆ ಚೀನೀಯರು ಸಮರ ಸಾರುತ್ತಿದ್ದಾರೆ. ಇದುವೇ ಅವರ ಸಮರತಂತ್ರದ ಹಿಂದಿನ ಉದ್ದೇಶ. ಅವರು ನರೇಂದ್ರ ಮೋದಿಯವರಿಗೆ ಹೇಳೋದು ಅದನ್ನೇ- ಚೀನಾ ಬಯಸಿದ್ದನ್ನು ನೀವು ಮಾಡದೇ ಇದ್ದರೆ, ನಾವು ನಿಮ್ಮ ಬಲಿಷ್ಠ ನಾಯಕತ್ವದ ಇಮೇಜ್​ಗೆ ಧಕ್ಕೆ ಉಂಟುಮಾಡುತ್ತೇವೆ.

ಈಗ ಇಲ್ಲಿನ ಪ್ರಶ್ನೆ ಏನಪ್ಪಾ ಅಂದ್ರೆ- ಈಗ ನರೇಂದ್ರ ಮೋದಿಯವರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು ಚೀನೀಯರನ್ನು ಎದುರಿಸುತ್ತಾರಾ ಅಥವಾ ಇಲ್ಲ ಖಂಡಿತವಾಗಿಯೂ ಇಲ್ಲ ಅಂತಾರಾ? ನಾನು ಭಾರತದ ಪ್ರಧಾನ ಮಂತ್ರಿ, ನನ್ನ ಇಮೇಜ್​ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನಿಮ್ಮನ್ನು ಎದುರಿಸಿಯೇ ಸಿದ್ಧ ಎಂದು ಹೇಳುತ್ತಾರಾ ಅಥವಾ ಅವರ ಎದುರು ಶಸ್ತ್ರಾಸ್ತ್ರ ಇಟ್ಟು ತಲೆಭಾಗುತ್ತಾರಾ? ನನ್ನ ಚಿಂತೆ ಏನಪ್ಪಾ ಅಂದರೆ ಚೀನೀಯರು ನಮ್ಮ ನೆಲದಲ್ಲಿ ಕುಳಿತಿದ್ದಾರೆ. ಪ್ರಧಾನಮಂತ್ರಿಯವರು ಇದನ್ನು ಸಾರ್ವಜನಿಕವಾಗಿಯೂ ಹೇಳಿದ್ದಾರೆ ಇಲ್ಲ ಅಂತ. ಇದುವರೆಗೆ ಪ್ರಧಾನಿ ಮೋದಿ ಏನು ಮಾಡಿದ್ರು? ಅವರು ಅವರ ಇಮೇಜ್ ಅನ್ನು ಕಾಪಾಡ್ತಿದ್ದಾರೆ. ಒಂದೊಮ್ಮೆ ಪ್ರಧಾನಿ ಮೋದಿ ತಮ್ಮ ಇಮೇಜ್ ಮುಂದಿಟ್ಟುಕೊಂಡು ಮ್ಯಾನಿಪುಲೇಟ್ ಮಾಡೋದಕ್ಕೆ ಚೀನೀಯರಿಗೆ ಅವಕಾಶ ಮಾಡಿಕೊಡ್ತಾ ಇದ್ದಾರಾ – ಹಾಗೇನಾದರೂ ಆದರೆ ಅವರು ಪ್ರಧಾನಮಂತ್ರಿಯಾಗಿರೋದಕ್ಕೆ ಲಾಯಕ್ಕಲ್ಲ.

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರನ್ನು ಕೂಡಲೇ ಸಂಪರ್ಕಿಸಲು Call Now ಬಟನ್ ಕ್ಲಿಕ್ ಮಾಡಿ