ಡಿಬೆಟ್ ನಲ್ಲಿ ಭಾಗವಹಿಸಿ ಮಂಗಳಾರತಿ ಎತ್ತಿಸಿಕೊಂಡಿದ್ದ ವಕೀಲ ಬಾಲನ್ ವಿರುದ್ಧ ಸಿಡಿದೆದ್ದ ಜನ! ಕೇಸ್ ದಾಖಲು!

ಕೊಪ್ಪ, ಜುಲೈ. 06: ಖಾಸಗಿ ಸುದ್ದಿ ಚಾನಲ್ ಒಂದರಲ್ಲಿ ನಡೆದ ಚರ್ಚೆಯಲ್ಲಿ ಹಿರಿಯ ವಕೀಲರಾದ ಬಾಲನ್ ಎಂಬುವವರು ಜೈ ಹಿಂದ್, ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬಿತ್ಯಾದಿ ಘೋಷಣೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ದೇಶ ಪ್ರೇಮಿಗಳ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಇವರ ವಿರುದ್ದ ಸ್ವಯಂ ಪ್ರೇರಿತವಾಗಿ ಇಲಾಖೆಯೂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ಶಿಕ್ಷೆ ನೀಡಬೇಕೆಂದು ಕೊಪ್ಪ ಪೊಲೀಸ್ ಠಾಣೆಗೆ ರಾಜೇಶ್ ಭಟ್ ಎಂಬುವವರು ದೂರು ನೀಡಿದ್ದಾರೆ.

ಈ ವೇಳೆಯಲ್ಲಿ ನಿವೃತ್ತ ಶಿಕ್ಷಕ ಹೆಚ್.ಎಸ್ ಶಿವಸ್ವಾಮಿ, ಹೆಚ್.ಆರ್ ಜಗದೀಶ್, ಅರವಿಂದ್, ರಕ್ಷಿತ್ ಮುಂತಾದವರಿದ್ದರು. ಮೂಲ : ಚಿಕ್ಕಮಗಳೂರು ಲೈವ್ 

Comments