ಸಿದ್ದರಾಮಯ್ಯಗೆ ಹಿಗ್ಗಾಮುಗ್ಗಾ ತಿರುಗೇಟು ನೀಡಿದ ಪ್ರಭಾವಿ ನಾಯಕ!

ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿ ವಿಚಾರದಲ್ಲಿ ನಡೆದ ಹಗರಣ ಆರೋಪದ್ದೇ ಸುದ್ದಿ. ನಿನ್ನೆ ವಿಪಕ್ಷ.. (ಜಾಹಿರಾತಿನ ನಂತರ ಓದಿ) ಮನೆಯಲ್ಲಿಯೇ ಕುಳಿತು ದಿನಕ್ಕೆ ಸಾವಿರಕ್ಕಿಂತಲೂ ಅಧಿಕ ಹಣ ಗಳಿಸಿ.. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಣ ಬಂದಿಲ್ಲ ಅಂದ್ರೆ ಮತ್ತೆ ನಮ್ಮನ್ನು ಕೇಳಿ.. we can earn upto 1000 Per day Visit: https://www.c2b.in/srt/1281535 ಲಿಂಕ್ ರಿಜಿಸ್ಟ್ರಾರ್ ಆದ ನಂತರ ಯಾವುದೇ ಸಪೋರ್ಟ್ ಬೇಕಾದಲ್ಲಿ https://wa.me/918105048087?text=Hi-whtsapp-1281535 ನಾಯಕ ಸಿದ್ದರಾಮಯ್ಯ ಕೊರೊನಾ ವೈದ್ಯಕೀಯ ಉಪಕರಣಗಳ ಹಗರಣದ ಬಗ್ಗೆ ಸರ್ಕಾರ ಸ್ಪಷ್ಟೀಕರಣ ಕೊಡುವ ತನಕ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದರು. ನಂತರ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ನಿಮ್ಮದೇ ಪಕ್ಷದ ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿಯವರ ಪೆನ್‌ಡ್ರೈವ್‌ನಲ್ಲಿದೆ ಎಂದು ಸಿಎಂ ಬಿಎಸ್‌ವೈ ಗೆ ಕುಟುಕಿದ್ದರು.

ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕ ಮುರುಗೇಶ್ ನಿರಾಣಿ, ರಾಜಕೀಯ ಲಾಭಕ್ಕೆ ನನ್ನ ಹೆಸರನ್ನು ತಳುಕು ಹಾಕುವುದು ಬೇಡ. ನನ್ನ ಬಳಿ ಆ ರೀತಿಯ ಪೆನ್‌ಡ್ರೈವ್ ಇಲ್ಲ ಎಂದಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ನನ್ನ ಬಳಿ ವಿಜಯಪುರ ಜಿಲ್ಲಾಸ್ಪತ್ರೆಯ ಅವ್ಯವಹಾರದ ಬಗ್ಗೆ 125 ಪುಟಗಳ ದಾಖಲೆಯ ಪೆನ್‌ಡ್ರೈವ್‌ ಇದೆ ಎಂದಿದ್ದರು. ಇದನ್ನು ನಾನು ಕೋವಿಡ್ ಬಗ್ಗೆ ಅವ್ಯವಹಾರದ ಕುರಿತು ಪಬ್ಲಿಕ್ ಅಕೌಂಟ್‌ ಕಮಿಟಿಯಲ್ಲಿ ಚರ್ಚೆಯಾಗುವ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದೆ ಎಂದು ನಿರಾಣಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಕೋವಿಡ್ ಸಂಬಂಧ ವೈದ್ಯಕೀಯ ಉಪಕರಣಗಳ ಖರೀದಿ ವಿಚಾರದಲ್ಲಿ ಹಗರಣ ನಡೆದಿದೆ. ಒಂದೊಂದು ಉಪಕರಣಕ್ಕೂ ದುಪ್ಪಟ್ಟು ವೆಚ್ಚ ವಿಧಿಸಿ ಸಾವಿರಾರು ಕೋಟಿ ರೂಪಾಯಿ ಜನರ ದುಡ್ಡನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯ ಅವರ ಆರೋಪಕ್ಕೆ ಸಿಎಂ ಸೇರಿದಂತೆ ಸಚಿವರುಗಳು ತಿರುಗೇಟು ನೀಡಿ ಎಲ್ಲಾ ದಾಖಲೆಗಳನ್ನು ನೀಡಲು ಸಿದ್ಧ ಎಂದಿದ್ದರು.

Comments