ಅಲ್ಲಾಹುವಿಗಾಗಿ ದೇವಸ್ಥಾನದ ಗೋಡೆ ಕೆಡವಿದ್ದೇನೆ, ಖುಷಿ ಆಗ್ತಿದೆ ; ಮುಸ್ಲಿಂ ಯುವಕನ ವೀಡಿಯೋ ನೋಡಿ!

ಇಸ್ಲಾಮಾಬಾದ್‌: ಇಲ್ಲಿ ನಿರ್ಮಾಣವಾಗುತ್ತಿರುವ ಹಿಂದೂಗಳ ಮೊದಲ ದೇವಾಲಯದ ಗೋಡೆಯನ್ನು ನೆಲಸಮಗೊಳಸಿರುವ ಯುವಕನೊಬ್ಬ ಅದನ್ನು ಸಂಪೂರ್ಣವಾಗಿ ಚಿತ್ರೀಕರಿಸಿ, ತನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾನೆ.

ಶ್ರೀಕೃಷ್ಣ ದೇವಾಲಯವನ್ನು ನಿರ್ಮಿಸಲು ಇಲ್ಲಿಯ ಹಿಂದೂಗಳು ಕಾಂಪೌಂಡ್‌ ಕಟ್ಟಿದ್ದರು. ಅದನ್ನು ನೆಲಸಮ ಮಾಡಿರುವ ಮಲಿಕ್‌ ಶಾನಿ ಆವಾನ್‌ ಎಂಬ ಯುವಕ, ಅಲ್ಹಾನನ್ನು ತೃಪ್ತಿಪಡಿಸಲು ಈ ಕಟ್ಟಡ ನೆಲಸಮ ಮಾಡಿದ್ದೇನೆ. ಇದರಿಂದ ತುಂಬಾ ಖುಷಿಯಾಗುತ್ತಿದೆ. ಇದನ್ನು ಮಾಡಲು ನೆರವಾದ ಅಲ್ಹಾನಿಗೆ ಕೃತಜ್ಞತೆಗಳು ಎನ್ನುವ ವಿಡಿಯೋ ಮಾಡಿದ್ದಾನೆ. ಈ ವಿಡಿಯೋಕ್ಕೆ ಸಂಗೀತದ ಹಿನ್ನೆಲೆ ನೀಡಿದ್ದಾನೆ.

‘ನಾನು ಪಾಕಿಸ್ತಾನ… ನನ್ನ ಮಕ್ಕಳನ್ನು ತೊಂದರೆಗೊಳಗಾಗಲು ನಾನು ಬಿಡಲಿಲ್ಲ’ ಎಂದು ಹೇಳಿರುವ ಹಾಡನ್ನು ಹಿನ್ನೆಲೆ ಗಾಯನವಾಗಿ ಇಟ್ಟಿರುವ ಈ ಯುವಕ, ಅದರಲ್ಲಿ ತಾನು ಕಟ್ಟಡ ನೆಲಸಮ ಮಾಡುತ್ತಿರುವುದನ್ನು ಚಿತ್ರೀಕರಿಸಿದ್ದಾನೆ.

Comments