ಮೂವರು ಉಗ್ರರನ್ನು ಯಮನ ಪಾದಕ್ಕಟ್ಟಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮ್ಶಿಪೋರಾದಲ್ಲಿ ಮೂವರು ಉಗ್ರರನ್ನು ಭಾರತಿಯ ಸೇನೆ ಸದೆಬಡಿದಿದೆ. ಇಂದು ಮುಂಜಾನೆ ಅಮ್ಶಿಪೋರಾದಲ್ಲಿ ಭದ್ರಾತ ಪಡೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ : ONLINEನಲ್ಲೇ ತಿಂಗಳಿಗೆ 20,000 ದಿಂದ 30,000 ತನಕ ಗಳಿಸೋ ಭರ್ಜರಿ ಗಿಫ್ಟ್ ನೀಡಿದ ಕನ್ನಡದ ಕಂಪೆನಿ
ನಿನ್ನೆಯಷ್ಟೇ ಕುಲ್ಗಾಂ ಜಿಲ್ಲೆಯ ನಾಗ್ನಾಡ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಯ ಎನ್‍ಕೌಂಟರ್‍ಗೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಉಗ್ರರು ಹತ್ಯೆಗೀಡಾಗಿದ್ದರು.
ಅಕದನವಿರಾಮ ಉಲ್ಲಂಘಿಸಿದ ಪಾಕ್:
ಇತ್ತ ನೆರೆ ರಾಷ್ಟ್ರ ಪಾಕಿಸ್ತಾನ ಇಂದು ಮುಂಜಾನೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗುಲ್ಪುರ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೂಂಚ್ ಜಿಲ್ಲೆಯ ಉಪ ಆಯುಕ್ತ ರಾಹುಲ್ ಯಾದವ್ ತಿಳಿಸಿದ್ದಾರೆ.