ಕೃಷಿ, ಆರೋಗ್ಯ, ವಿದ್ಯುತ್, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಘಟಕಗಳನ್ನು ಉತ್ತೇಜಿಸಲು ಯುಪಿ-ಸ್ಟಾರ್ಟ್ ಅಪ್ ನೀತಿ 2020ಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅನುಮೋದನೆ ನೀಡಿದೆ. ಈ ನೀತಿಯನ್ನು ರಾಜ್ಯ ಸಂಪುಟ ಬುಧವಾರ ಸಂಜೆ ಅಂಗೀಕರಿಸಿತ್ತು.
ಕೇಂದ್ರದ ಸ್ಟಾರ್ಟ್-ಅಪ್ ಶ್ರೇಯಾಂಕದಲ್ಲಿ ಯುಪಿ ಮೊದಲ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆದಿರುವುದನ್ನು ಖಚಿತಪಡಿಸುವುದು, 100 ಇನ್ಕ್ಯುಬೇಟರ್ಗಳನ್ನು ರಚಿಸುವುದು, ಪ್ರತಿ ಜಿಲ್ಲೆಯಲ್ಲೆ ಕನಿಷ್ಠ 10,000 ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸಲು ಪರಿಸರ ವ್ಯವಸ್ಥೆಯನ್ನು ರಚಿಸುವುದು ನೀತಿಯ ಉದ್ದೇಶವಾಗಿದೆ. ಅತ್ಯಾಧುನಿಕ ಉತ್ಕೃಷ್ಟ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಲಕ್ನೋದಲ್ಲಿ ದೇಶದ ಅತಿ ದೊಡ್ಡ ಇನ್ಕ್ಯುಬೇಟರ್ ಅನ್ನು ರಚಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಈ ನೀತಿಯು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು 50,000 ಜನರಿಗೆ ನೇರ ಉದ್ಯೋಗ ಮತ್ತು 1 ಲಕ್ಷ ಜನರಿಗೆ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಸರ್ಕಾರದ ವಕ್ತಾರರ ಪ್ರಕಾರ, ಪ್ರಸ್ತುತ, ಯುಪಿ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್-ಅಪ್ ನೀತಿ 2017 ಜಾರಿಯಲ್ಲಿದೆ.
ಯುಪಿ ಸರ್ಕಾರ ಈಗಾಗಲೇ ಸ್ಟಾರ್ಟ್ ಅಪ್ಗಳಿಗೆ ಸಬ್ಸಿಡಿಯನ್ನು ಒದಗಿಸುತ್ತಿದೆ ಮತ್ತು ಈ ಕ್ಷೇತ್ರದಲ್ಲಿ ಹೊಸದಾಗಿ ಪ್ರವೇಶಿಸುವವರನ್ನು ಉತ್ತೇಜಿಸಲು 1,000 ಕೋಟಿ ರೂ.ನಿಧಿಯನ್ನು ಇರಿಸಲಾಗಿದೆ. ಸ್ಟಾರ್ಟ್ ಅಪ್ಗಳ ಪ್ರಚಾರಕ್ಕಾಗಿ ಆನ್ಲೈನ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ.