ರಾಮಮಂದಿರದ ಶಿಲಾನ್ಯಾಸಕ್ಕೂ ಮುನ್ನ ಬಿಜೆಪಿ ಭೀಷ್ಮ ಆಡ್ವಾಣಿ ಜೀ ಪರವಾಗಿ ಆರಂಭವಾಯ್ತು ಹೊಸ ಮನವಿ.?

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಆಗಸ್ಟ್ 5ರಂದು ಶಿಲಾನ್ಯಾಸ ನಡೆಯುವುದಕ್ಕೂ ಮುನ್ನ ಬಾಬ್ರಿ ಕಟ್ಟಡ ಪ್ರಕರಣದಿಂದ ಹಿರಿಯ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿಯನ್ನು ಮುಕ್ತಗೊಳಿಸಿ ಎಂದು ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಿರಿಯ ನಾಯಕರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ 'ಬಾಬ್ರಿ ಕಟ್ಟಡ ನಾಶದ ನಗಣ್ಯ ಮೊಕದ್ದಮೆಯನ್ನು ಮುಕ್ತಾಯಗೊಳಿಸುವಂತೆ ಪ್ರಧಾನಿ ಆದೇಶಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ. ರಾಮಮಂದಿರ ಆಂದೋಲನದಲ್ಲಿ ಭಾಗಿಯಾಗಿದ್ದ ಈ ನಾಯಕರು. ಮಸೀದಿ ಕೆಡವಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.