ಮೆಚ್ಚುಗೆಗೆ ಪಾತ್ರವಾಗಿದೆ ಗೌತಮ್ ಗಂಭೀರ್ ಮಾಡಿರುವ ಈ ಕಾರ್ಯ

ಟೀಂ ಇಂಡಿಯಾದ ಮಾಜಿ ನಾಯಕ, ಸಂಸದ ಗೌತಮ್ ಗಂಭೀರ್ ಅವರು ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳನ್ನು ದತ್ತು ಪಡೆದಿದ್ದಾರೆ.

ಹೌದು, ಲೈಂಗಿಕ ಕಾರ್ಯಕರ್ತರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ ಸೇರಿದಂತೆ ಎಲ್ಲ ಅಗತ್ಯತೆಗಳನ್ನು ಪೂರೈಸುವಂತ ಪಂಖ್ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಪ್ರಾರಂಭಿಕವಾಗಿ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳನ್ನು ದತ್ತು ಪಡೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಸೆಕ್ಸ್ ವರ್ಕರ್ಸ್ ಮಕ್ಕಳನ್ನು ಆ ಪಾಪಾ ಕೂಪದಿಂದ ಹೊರಗೆ ತರಲು ಪಂಖ್ ಎನ್ನುವ ಕಾರ್ಯಕ್ರಮವನ್ನು ನಾನು ಆರಂಭಿಸುತ್ತಿದ್ದೇನೆ. ಪ್ರಾರಂಭಿಕವಾಗಿ ಶಿಕ್ಷಣ, ವಸತಿ ಸೇರಿದಂತೆ 25 ಮಕ್ಕಳ ಎಲ್ಲ ಅಗತ್ಯತೆಗಳನ್ನು ಪೂರೈಸಲು ನಾನು ನಿರ್ಧರಿಸಿದ್ದೇನೆ ಇದಕ್ಕೆ ಕೈಲಾದ ಕೊಡುಗೆ ನೀಡಿ ಎಂದು ಕೋರಿದ್ದಾರೆ.