ಸ್ಪೋಟಕ ಬ್ರೇಕಿಂಗ್: ಡ್ರೋನ್ ಪ್ರತಾಪ್ ಬಂಧನಕ್ಕೆ ರೆಡಿಯಾಯ್ತು ಸ್ಪೇಷಲ್ ಟೀಮ್.! ಕಾರಣ ಕೇಳಿದ್ರೆ ಶಾಕ್ ಆಗ್ತೀರ.?

ಡ್ರೋನ್​ ತಯಾರಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಡ್ರೋನ್​ ಪ್ರತಾಪ್​ ಅಸಲಿ ಮುಖ ಇತ್ತೀಗಷ್ಟೇ ಬಯಲಾಗಿತ್ತು. ಈಗ ಈತನಿಗೆ ಸಂಕಷ್ಟವೊಂದು ಎದುರಾಗಿದೆ. ಪ್ರತಾಪ್​ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಡ್ರೋನ್ ಪ್ರತಾಪ್ ಬಂಧನಕ್ಕಾಗಿ ಮೂರು ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿಜನ್ ಸ್ಕ್ವಾಡ್ ಪ್ರತಾಪ್​ಗಾಗಿ ಹುಡುಕಾಟ ನಡೆಸುತ್ತಿದೆ. ಅಂದಹಾಗೆ ಇವರನ್ನು ಬಂಧನ ಮಾಡುತ್ತಿರುವುದು ಆತ ಸುಳ್ಳು ಹೇಳಿದ್ದಕ್ಕಲ್ಲ. ಇದಕ್ಕೆ ಬೇರೆಯದೇ ಕಾರಣವಿದೆ. ಡ್ರೋನ್ ಪ್ರತಾಪ್ ಇದೇ 15 ರಂದು ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್​ವೊಂದರಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ ಆಗಿದ್ದ. ನಿಯಮದ ಪ್ರಕಾರ ಆತ 14ದಿನಗಳ ಕಾಲ ಕ್ವಾರಂಟೈನ್​ ಆಗಬೇಕಿತ್ತು. ಆದರೆ, ಕ್ವಾರಂಟೈನ್ ಆದ ಮರುದಿನವೇ ಖಾಸಗಿ ಚಾನೆಲ್​ನ ಸಂದರ್ಶನದಲ್ಲಿ ಪ್ರತಾಪ್ ಪಾಲ್ಗೊಂಡಿದ್ದ.

ಪ್ರತಾಪ್​ ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್​ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಸದ್ಯ ಪ್ರತಾಪ್​ ಫೋನ್​ ಸ್ವಿಚ್ ಆಫ್ ಬರುತ್ತಿದೆ. ಈತ ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಪ್ರತಾಪ್​ ಇದ್ದಾನೆ ಎನ್ನುವ ಮಾಹಿತಿ ಇದೆ. ಹೀಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.​ ಡ್ರೋನ್​ ತಯಾರಿಸಿದ್ದೇನೆ, ಬೇರೆ ರಾಷ್ಟ್ರಗಳಲ್ಲಿ ತನ್ನನ್ನು ಕರೆದು ಗೌರವಿಸಿವೆ ಎಂದು ಪ್ರತಾಪ್​ ಹೇಳಿಕೊಂಡಿದ್ದ. ಅಲ್ಲದೆ, ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡಿದ್ದ. ಆದರೆ, ಇದೆಲ್ಲವೂ ಸುಳ್ಳು ಎಂಬುದು ಇತ್ತೀಚೆಗೆ ಗೊತ್ತಾಗಿತ್ತು.