ಕೊನೆಗೂ ಸಿಕ್ತು ಕೊರೋನಾ ರೋಗಕ್ಕೆ ಔಷಧ, ಜಗತ್ತಿಗೆ ಖುಷಿ ಸುದ್ದಿ ಕೊಟ್ಟ ದೇಶ ಯಾವುದು

ಇಂಗ್ಲೆಂಡ್​ನ ಆಕ್ಸ್​ಫರ್ಡ್​ ಯುನಿವರ್ಸಿಟಿ ವಿಜ್ಞಾನಿಗಳು ಕೊರೋನಾಗೆ ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಕಳೆದ ಏಪ್ರಿಲ್​ನಿಂದಲೂ ಇಲ್ಲಿನ ವಿಜ್ಞಾನಿಗಳು ಕೊರೋನಾಗೆ ಔಷಧ ಕಂಡುಹಿಡಿಯಲು ಸಂಶೋಧನೆ ನಡೆಸಿದ್ದರು. ಇದೀಗ ಕಂಡುಹಿಡಿದಿರುವ ಔಷಧಿಯಿಂದ ಕೋಟ್ಯಂತರ ಕೊರೋನಾ ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಏಪ್ರಿಲ್ ತಿಂಗಳಿನಿಂದ ಕೊರೋನಾಗೆ ಔಷಧ ಕಂಡುಹಿಡಿಯಲು ಇಂಗ್ಲೆಂಡ್​ನಲ್ಲಿ ಸಂಶೋಧನೆಗಳು ನಡೆಯುತ್ತಿತ್ತು. 1,000 ಕೊರೋನಾ ರೋಗಿಗಳ ಮೇಲೆ ಈ ಪ್ರಯೋಗವನ್ನು ಮಾಡಲಾಗಿತ್ತು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಕೊರೋನಾ ಔಷಧಿಯ ಪ್ರಯೋಗವನ್ನು ನಡೆಸಲಾಗಿತ್ತು. ಇದೀಗ ನಡೆಸಿರುವ ಪ್ರಯೋಗದಲ್ಲಿ ಈ ಔಷಧಿಗಳು ರೋಗಿಗಳ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಇಂದು ಲ್ಯಾನ್ಲೆಟ್ ಎಂಬ ಮೆಡಿಕಲ್ ಪತ್ರಿಕೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಿಂದ ಸಿದ್ಧಪಡಿಸಲಾಗಿರುವ ಔಷಧವನ್ನು ಎರಡು ಹಂತಗಳಲ್ಲಿ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದೆ. 18ರಿಂದ 55 ವರ್ಷದವರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿದೆ. ಎಲ್ಲರೂ ಔಷಧಿಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಸ್ಟ್ರಾಜೆನೆಕ್ ಫಾರ್ಮಾಸುಟಿಕಲ್ಸ್​ ಸಹಯೋಗದಲ್ಲಿ ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್​ ಯುನಿವರ್ಸಿಟಿ ಔಷಧವನ್ನು ಕಂಡುಹಿಡಿದಿದೆ. ಈ ಪ್ರಯೋಗ ಯಶಸ್ವಿಯೂ ಆಗಿದೆ. ಇನ್ನು ಒಂದು ಹಂತದ ಪ್ರಯೋಗ ಮಾಡುವುದು ಬಾಕಿ ಇದೆ. ಒಂದುವೇಳೆ ಈ ಔಷಧ ಯಶಸ್ವಿಯಾದರೆ 200 ಕೋಟಿ ಔಷಧವನ್ನು ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ.

ಸದ್ಯಕ್ಕೆ ಕಂಡುಹಿಡಿಯಲಾಗಿರುವ ಔಷಧಿಯಿಂದ ಜ್ವರ, ಚಳಿ, ಮೈಕೈ ನೋವು ಮುಂತಾದ ಸಣ್ಣಪುಟ್ಟ ಸೈಡ್ ಎಫೆಕ್ಟ್​ ಉಂಟಾಗುತ್ತಿದೆ. ಅಮೆರಿಕದಲ್ಲೂ ಸದ್ಯದಲ್ಲೇ 30,000 ರೋಗಿಗಳ ಮೇಲೆ ಔಷಧದ ಪ್ರಯೋಗ ನಡೆಯಲಿದೆ. ವಿಶ್ವಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ಮಿತಿ ಮೀರುತ್ತಿರುವುದರಿಂದ ಇದೀಗ ಕಂಡುಹಿಡಿಯುವ ಔಷಧದ ಬಗ್ಗೆ ನಿರೀಕ್ಷೆಗಳೂ ಹೆಚ್ಚಾಗಿವೆ.