ಸ್ಪೋಟಕ ಬ್ರೇಕಿಂಗ್: ಬಿಜೆಪಿ ನಾಯಕನನ್ನು ಹೊಗಳಿದ ಶಿವಸೇನೆ, ಇದು ಕೊರೊನಾ ವಿರುದ್ದದ ಒಗ್ಗಟ್ಟಿನ ಹೋರಾಟ.!

ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಹೊಗಳಿರುವ ಶಿವಸೇನೆ, ವಿರೋಧ ಪಕ್ಷದ ನಾಯಕನಾಗಿ ದೇವೇಂದ್ರ ಫಡ್ನವಿಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದ ದೇವೇಂದ್ರ ಫಡ್ನವಿಸ್ ಅವರ ಮಾತುಗಳು ರಾಜ್ಯ ಸರ್ಕಾರದಲ್ಲಿ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ ಕೊರೋನಾ ರೋಗಿಗಳಲ್ಲಿ ಕೂಡ ಧೈರ್ಯ ಹೆಚ್ಚುತ್ತದೆ ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.

ಮುಖ್ಯಮಂತ್ರಿಯಾಗಿದ್ದಾಗ ಹೇಗೆ ಕೆಲಸ ಮಾಡುತ್ತಿದ್ದರೋ, ವಿರೋಧ ಪಕ್ಷದ ನಾಯಕನಾಗಿ ಕೂಡ ಅಷ್ಟೇ ಉತ್ಸಾಹ, ಹುರುಪಿನಿಂದ ದೇವೇಂದ್ರ ಫಡ್ನವಿಸ್ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ನಂತರ ಟ್ರೋಲ್ ಗಳು ಸಾಕಷ್ಟು ಹರಿದುಬಂದವು ಅದು ಸರಿಯಲ್ಲ, ವಿರೋಧ ಪಕ್ಷದ ನಾಯಕನಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.