ಮಾನವೀಯತೆ ಮೆರೆಯುವ ಕಾರ್ಯ ಮಾಡುವ ಮೂಲಕ ಮತ್ತೊಮ್ಮೆ ಭಾರತೀಯರ ಪಾಲಿಗೆ ರಿಯಲ್ ಹಿರೋ ಅದ ಸೋನು ಸೂದ್

ಖ್ಯಾತ ಬಾಲಿವುಡ್ ನಟ ಸೋನು ಸೂದ್ ಅಸಹಾಯಕರ ಸಹಾಯಕ್ಕೆ ನಿಂತಿದ್ದಾರೆ. ಲಾಕ್ ಡೌನ್ ವೇಳೆ ಸಿಕ್ಕಿಬಿದ್ದಿದ್ದ ಕಾರ್ಮಿಕರ ಸಹಾಯಕ್ಕೆ ಬಂದಿದ್ದರು. ಅವ್ರು ಊರು ತಲುಪಲು ಬಸ್ ವ್ಯವಸ್ಥೆ ಮಾಡುವ ಜೊತೆಗೆ ಆಯಾ ರಾಜ್ಯದ ಅಧಿಕಾರಿಗಳ ಜೊತೆ ಮಾತನಾಡಿ ವ್ಯವಸ್ಥೆ ಮಾಡಿಸಿದ್ದರು. ಈಗ ಮತ್ತೆ ಸೋನು ಚರ್ಚೆಯಲ್ಲಿದ್ದಾರೆ.

ಸೋನು ಸೂದ್ ಗೆ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ಪತಿ ಸಾವನ್ನಪ್ಪಿದ್ದು ಮಾಲೀಕ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾನೆ. ಇಬ್ಬರು ಮಕ್ಕಳ ಜೊತೆ ಮಹಿಳೆ ಬೀದಿಯಲ್ಲಿ ಉಳಿದಿದ್ದಾಳೆ. ಸರ್ಕಾರದ ಸಹಾಯ ನಿರೀಕ್ಷಿಸುವುದಿಲ್ಲ. ನೀವು ಸಹಾಯ ಮಾಡಿ ಎಂದು ವ್ಯಕ್ತಿ ಟ್ವೀಟ್ ಮಾಡಿದ್ದಾನೆ.

ಮಹಿಳೆ ಪಾಟ್ನಾ ನಿವಾಸಿ ಎಂದು ಆತ ಬರೆದಿದ್ದಾನೆ. ಇದನ್ನು ರೀ ಟ್ವೀಟ್ ಮಾಡಿದ ಸೋನು, ಸಹಾಯಕ್ಕೆ ಮುಂದಾಗಿದ್ದಾರೆ. ನಾಳೆ ಈ ಕುಟುಂಬದ ತಲೆ ಮೇಲೆ ಛಾವಣಿಯಿರುತ್ತೆ ಎಂದು ಸೋನು ಟ್ವೀಟ್ ಮಾಡಿದ್ದಾರೆ. ಸೋನು ಈ ಟ್ವೀಟ್ ವೈರಲ್ ಆಗಿದ್ದು, ಜನರು ಖುಷಿ ವ್ಯಕ್ತಪಡಿಸಿದ್ದಾರೆ.