ಕೊನೆಗೂ ಸುಳ್ಳು ಹೇಳಿದ್ದ ಡ್ರೋಣ್ ಪ್ರತಾಪ್ ಪೊಲೀಸ್ ವಶಕ್ಕೆ! ಕಾರಣವೇನು ನೋಡಿ!

ತನ್ನ ಸುಳ್ಳು ಭಾಷಣಗಳ ಮೂಲಕ ಇಡೀ ರಾಜ್ಯದ ಜನರನ್ನು ಮಂಗ ಮಾಡಿದ್ದ ಫೇಕ್ ಡ್ರೋಣ್ ಪ್ರತಾಪನನ್ನು ಮೈಸೂರಿನಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಾಪ್‌ ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊರ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಪ್ರತಾಪ್‌ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ. ಅಂಜನಾಪುರದ ಎಸ್.ಎಫ್-ಎಂ.ಐ.ಎಂ.ಜಿ ವಿಂಡ್ ಪಾಲ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ. ಇಲ್ಲೇ ಕ್ವಾರಂಟೈನ್‌ ನಲ್ಲಿರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ಕೈಗೆ ಸೀಲ್‌ ಕೂಡಾ ಹಾಕಿದ್ದರು. ಆದರೆ, ಪ್ರತಾಪ್‌ ಪ್ಲಾಟ್‌ ನಿಂದ ಹೊರಬಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ. ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಹೋಂ ಕ್ವಾರೆಂಟೈನ್ ನಿಯಮ ಉಲ್ಲಂ‍ಘನೆ ಮಾಡಿದ ಕಾರಣಕ್ಕೆ ಡಾ. ಪ್ರಯಾಗ್ ಎಂಬುವವರು ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸೋಮವಾರ ಪ್ರತಾಪ್‌ ನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.