ಚೀನಾಗೆ ಮರ್ಮಾಘಾತ.! 48 ಗಂಟೆಗಳಲ್ಲಿಯೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ ರಷ್ಯಾ.!

ಭಾರತ ಹಾಗೂ ಚೀನಾ ಗಡಿಯಲ್ಲಿ ಯಾವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಭಾರತೀಯ ಸೇನೆಯು ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ದವಾಗಿ ನಿಂತಿದೆ.

ಇನ್ನು ಭಾರತೀಯ ಸೇನೆಯು ತ್ವರಿತ ಗತಿಯಲ್ಲಿ ಹಲವಾರು ಶಸ್ತ್ರಾಸ್ತ್ರ ಗಳನ್ನೂ ಆಮದು ಮಾಡಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ. ರಫೇಲ್ ಯುದ್ಧ ವಿಮಾನಗಳು ಕೂಡ ಮುಂದಿನ ತಿಂಗಳು ಭಾರತಕ್ಕೆ ಬರಲಿವೆ (ಫ್ರಾನ್ಸ್ ದೇಶದಿಂದ). ಅದೇ ರೀತಿ ದೈನಂದಿನ ಅಗತ್ಯ ರಕ್ಷಣಾ ಸಾಧನಗಳಿಗಾಗಿ ರಷ್ಯಾ ದೇಶದ ಬಳಿ ಭಾರತ ಮನವಿ ಮಾಡಿತ್ತು, ರಷ್ಯಾ ದೇಶವು ಕೂಡ ಬಹುಬೇಗ ಕಳುಹಿಸಿ ಕೊಡುತ್ತೇವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿತ್ತು, ಆದರೆ ಯಾವುದೇ ದಿನಾಂಕವನ್ನು ರಷ್ಯಾ ದೇಶ ನಮೂದಿಸಿರಲಿಲ್ಲ.

ಇದೀಗ ಭಾರತದ ಮನವಿಗೆ ಅಸ್ತು ಎಂದಿರುವ ರಷ್ಯಾ ದೇಶ, ಭಾರತದ ವತಿಯಿಂದ ಅಧಿಕೃತ ಪಟ್ಟಿಗಾಗಿ ಕಾಯುತ್ತಿರುವುದಾಗಿ ತಿಳಿಸಿ, ಪಟ್ಟಿ ಕೈ ಸೇರಿದ ಬಳಿಕ ಎರಡು ಅಥವಾ ಮೂರು ತಿಂಗಳು ಗಳಲ್ಲಿ ಭಾರತಕ್ಕ್ಕೆ ಅಗತ್ಯವಿರುವ ಎಲ್ಲಾ ಶಸ್ತ್ರಾಸ್ತ್ರ ಗಳನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದೆ. ಭಾರತೀಯ ಸೇನೆಯು ಸಾಕಷ್ಟು ದಾಸ್ತಾನು ಹೊಂದಿದ್ದರೂ ಕೂಡ ಚೀನಾ ದೇಶದ ಎಲ್ಲಾ ಸವಾಲುಗಳನ್ನು ಎದುರಿಸಲು ಮತ್ತಷ್ಟು ಸಾಧನಗಳು ಇದ್ದರೇ ಉತ್ತಮ ಎಂಬುದು ಭಾರತೀಯ ಸೇನೆಯ ಲೆಕ್ಕಾಚಾರವಾಗಿದೆ. ಅದೇ ಕಾರಣಕ್ಕೆ ಇದೀಗ ರಷ್ಯಾ ದೇಶದ ಕದ ತಟ್ಟಿದೆ.

ಆದ್ಯಾಗೂ ಚೀನಾ ದೇಶ ಎಲ್ಲಾ ಒಪ್ಪಂದಗಳನ್ನು ತಡ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಚೀನಾ ದೇಶದ ಜೊತೆ ಇತ್ತೀಚಿಗೆ ರಷ್ಯಾ ದೇಶ ಹಲವಾರು ಒಪ್ಪಂದಗಳನ್ನು ಮಾಡಿಕೊಂಡು ಸ್ನೇಹ ವೃದ್ಧಿಸಿಕೊಂಡಿದ್ದರೂ ಕೂಡ ಭಾರತ ಎಂದ ತಕ್ಷ ರಷ್ಯಾ ದೇಶ ಮರು ಆಲೋಚನೆ ಕೂಡ ಮಾಡದೇ ರಫ್ತ್ತು ಮಾಡಲು ಮುಂದಾಗಿರುವುದು ನಿಜಕ್ಕೂ ಖುಷಿ ಕೊಡುವ ಸಂಗತಿಯಾಗಿದೆ.