ಮೆಗಾ ಬ್ರೇಕಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಗೆ ಕ್ವಾರಂಟೈನ್ ನೋಟಿಸ್.?

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಯ ಕೆಲಸಗಾರನ ಮಗಳಿಗೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಗೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ.

ಹೌದು, ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮಗಳಿಗೆ ಕೊರೊನಾ ಸೋಂಕು ತಗುಲಿದ್ದು, ಈ ಹಿನ್ನೆಲೆ ಮನಮೋಹನ್ ಸಿಂಗ್ ಮನೆಯಲ್ಲಿಯೇ ಸೋಂಕಿತರ ಯುವತಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮನಮೋಹನ್ ಸಿಂಗ್ ಮನೆಗೆ ಕ್ವಾರಂಟೈನ್ ಬೋರ್ಡ್ ಹಾಕಲಾಗಿದೆ.

ಮನಮೋಹನ್ ಸಿಂಗ್ ಮನೆ ಕೆಲಸಗಾರನ ಮಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇದರಿಂದ ಮಾಜಿ ಪ್ರಧಾನಿಗೆ ಕೊರೊನಾ ಟೆನ್ಶನ್ ಶುರುವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕರುಗಳು ಮನಮೋಹನ್ ಸಿಂಗ್ ಗೆ ಅವರಿಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುತ್ತಿದ್ದಾರೆ.

Comments