ಶಕ್ತಿಶಾಲಿ ಆಂಜನೇಯನನ್ನು ಪ್ರಾರ್ಥಿಸುತ್ತಾ ಪ್ರಧಾನ ತಾಂತ್ರಿಕ್ ಕಾರ್ತಿಕ್ ರಾವ್ ಅವರಿಂದ ದಿನಭವಿಷ್ಯ ನೋಡಿ!

Mesha/ಮೇಷ

ಎಡುರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನವು ಸಂತಸ ತಂದೀತು. ಆತ್ಮಸ್ಥೆರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ.

Vrishabha/ವೃಷಭ

ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ, ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿಯಲಿವೆ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು ಮುನ್ನಡೆ ಸಾಧಿಸಲಿದ್ದೀರಿ. .

Mithuna/ಮಿಥುನ

ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ನ್ಯಾಯಾಲಯದ ವಾದ, ವಿವಾದಗಳು ಸದ್ಯಕ್ಕೆ ಮುಕ್ತಾಯ ಗೊಳ್ಳುವ ಲಕ್ಷಣ ಕಂಡುಬಾರದು. ಆದಕಾರಣ ಎಲ್ಲಾ ವಿಚಾರದಲ್ಲಿ ಜಾಗ್ರತೆ ಇರಲಿ.

Kataka/ಕಟಕ

ಈವಾರ ಕೊಂಚ ಆರ್ಥಿಕವಾಗಿ ಹಾಗೂ ಆಶಾದಾಯಕವಾಗಿ ಮುಂದುವರಿಯಲು ಸಾಧಕವಾಗ ಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ನಿರೀಕ್ಷಿತ ಕಾರ್ಯ  ಸಾಧನೆಗೆ ಅನುಕೂಲವಾಗಲಿದೆ. ನಿರುದ್ಯೋಗಿಗಳಿಗೆ ಸಿಹಿಸುದ್ದಿ.

Simha/ಸಿಂಹ

ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ದಿನವಾಗಿ ತೋರಿ ಬರಲಿದೆ. ಆದಕಾರಣ ಕಾಲೋಚಿತವಾದ ನೇರ ನುಡಿಯು ನಿಮ್ಮ ಗಮನದಲ್ಲಿರಿಸಿರಿ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬಂದೀತು. ಆಭಿವೃದ್ಧಿ ಇದೆ.

Kanya/ಕನ್ಯಾ

ಹಿತಶತ್ರುಗಳ ಉಪಟಳದಿಂದ ಕಾರ್ಯ ರಂಗ  ದಲ್ಲಿ ಭಯದ ವಾತಾವರಣ ನಿಮ್ಮನ್ನು ಬಾಧಿಸ ಲಿದೆ. ಇದರಿಂದ ಕಾರ್ಯಸಾಧನೆ ಏನೆಂಬುದನ್ನು ನೆನೆಪಿಸಿ ಕೊಡಬೇಕಾದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವು ಇರದು.

Tula/ತುಲಾ

ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಆರ್ಥಿಕವಾಗಿ ಏರಿಳಿತಗಳು ಕಂಡು ಬಂದು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಖರ್ಚುವೆಚ್ಚಗಳಲ್ಲಿ ಹಿಡಿತ ಸಾಧಿಸುವುದು ಅಗತ್ಯ.

Vrishika/ವೃಶ್ಚಿಕ

ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದರಿಂದ ಋಣಬಾಧೆಯಿಂದ ಮುಕ್ತರಾಗುವ ಸಮಯವಿದು. ಸರಕಾರಿ ಕಾರ್ಯಸಿದ್ಧಿಯಾಗಿ ಸಂತಸ ತಂದೀತು. ಗೃಹದಲ್ಲಿ ಆಪೆ¤àಷ್ಟರ ಭೇಟಿ, ಸತ್ಕಾರಾದಿಗಳಿರುತ್ತವೆ. .

Dhanussu/ಧನು

ಆರ್ಥಿಕವಾಗಿ ಅದೃಷ್ಟಾನುಕೂಲವಿದೆ. ಉದ್ಯೋಗಿಗಳಿಗೆ ವರ್ಗಾವಣೆ ತೋರಿ ಬಂದೀತು. ಶುಭಮಂಗಲ ಕಾರ್ಯಗಳು ನಿಮ್ಮಿಚ್ಛೆಯಂತೆ ನಡೆದು ನಿಮ್ಮ ಮನಸ್ಸು ಸಂತೃಪ್ತಿಗೊಳಲಿದೆ. ಆರೋಗ್ಯದಲ್ಲಿ ಗಮನವಿರಲಿ.

Makara/ಮಕರ

ನಿಶ್ಚಿತ ಗುರಿಯತ್ತ ಸಾಗುವಲ್ಲಿ ಅನೇಕ ಅಡಚಣೆಗಳು ಕಂಡು ಬಂದರೂ ನಿಮ್ಮ ಪ್ರಯತ್ನಬಲದ ಕ್ರಿಯಾಶಕ್ತಿಯಿಂದ ನಿಮ್ಮಿಚ್ಛೆಯಂತೆ ಎಲ್ಲವೂ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು.

Kumbha/ಕುಂಭ

ವೃತ್ತಿರಂಗದಲ್ಲಿರಲೀ, ಕುಟುಂಬದಲ್ಲಿರಲೀ, ಹೊಂದಾಣಿಕೆಯು ಮುನ್ನಡೆಗೆ ಸಾಧಕವಾಗಲಿದೆ. ಕೆಲವೊಂದು ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ನಡೆದು ನಿಮಗೆ ಅಚ್ಚರಿ ತಂದೀತು. ಯುವಕರಿಗೆ ವೈವಾಹಿಕ ಯೋಗ ತರಲಿದೆ.

Meena/ಮೀನ

ರಾಹುವಿನಿಂದ ಗ್ರಹಕಾರ್ಯಗಳ ಚಿಂತೆ, ಧರ್ಮಕಾರ್ಯ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಕಿರಿಕಿರಿ ನಿಮ್ಮನ್ನು ಬಾದಿಸಿದರೂ ಅನಿರೀಕ್ಷಿತ ರೂಪದಲ್ಲಿ ದೈವಾನುಗ್ರಹದಿಂದ ಸಮಾಧಾನದ ವಾತಾವರಣ ವಿರುತ್ತದೆ.

Comments