Featured Post

ಸ್ಪೋಟಕ ಬ್ರೇಕಿಂಗ್: ಏಕೈಕ ರಾಜ್ಯಸಭಾ ಸ್ಥಾನ ಗೆದ್ದು ಜಯಭೇರಿ ಬಾರಿಸಿದ ಬಿಜೆಪಿ, ಮತ್ತೊಮ್ಮೆ ಕಂಗಾಲದ ವಿಪಕ್ಷಗಳು

ಆಡಳಿತಾರೂಢ ಬಿಜೆಪಿಯಿಂದ ನಾಮನಿರ್ದೇಶನಗೊಂಡ ನಬಮ್ ರೆಬಿಯಾ ಶುಕ್ರವಾರ ಅರುಣಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನವನ್ನು ಅವಿರೋಧವಾಗಿ ಗೆದ್ದುಕೊಂಡಿದ್ದಾರೆ. ಈ ಬಗ್ಗೆ ಚುನಾವಣಾ ಇಲಾಖೆಯ ಅಧಿಕಾರಿ ಪ್ರಕಟಿಸಿದ್ದಾರೆ.

1996 ರಿಂದ 2002 ಮತ್ತು 2002 ರಿಂದ 2008 ರವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಎರಡು ಬಾರಿ ರಾಜ್ಯಸಭೆಯಲ್ಲಿ ಈಶಾನ್ಯ ರಾಜ್ಯವನ್ನು ಪ್ರತಿನಿಧಿಸಿದ್ದ ರೆಬಿಯಾ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಶುಕ್ರವಾರ ಮಧ್ಯಾಹ್ನ ನಾಮಪತ್ರ ಹಿಂತೆಗೆದುಕೊಳ್ಳುವ ಸಮಯ ಮುಕ್ತಾಯವಾದ ನಂತರ ಅವರನ್ನು ವಿಜೇತರಾಗಿ ಘೋಷಿಸಲಾಯಿತು ಎಂದು ವರದಿಗಳು ತಿಳಿಸಿವೆ. ಈ ಏಕೈಕ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿ ಇರಲಿಲ್ಲ ಎಂದು ಅರುಣಾಚಲ ಪ್ರದೇಶ ಚುನಾವಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿರೋಧ ಪಕ್ಷದ ಕಾಂಗ್ರೆಸ್‌ನ ಮುಕುತ್ ಮಿಥಿ ಅವರು ಅರುಣಾಚಲಪ್ರದೇಶ ರಾಜ್ಯದಿಂದ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರ ಅಧಿಕಾರಾವಧಿ ಜೂನ್ 23 ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಚುನಾವಣೆ ಏರ್ಪಟ್ಟಿದ್ದು, ರೆಬಿಯಾ ಆಯ್ಕೆಯಾಗಿದ್ದಾರೆ.
57 ವರ್ಷದ ಬಿಜೆಪಿ ಮುಖಂಡ ರೆಬಿಯಾ ಅವರು ವಿಧಾನಸಭೆ ಸ್ಪೀಕರ್ ಮತ್ತು ಕ್ಯಾಬಿನೆಟ್ ಮಂತ್ರಿಯಾಗಿ ಆ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್‌ನಲ್ಲಿದ್ದ ಅವರು ಬಳಿಕ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದರು.

60 ಸದಸ್ಯರ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ ಬಳಿ 41 ಶಾಸಕರು ಮತ್ತು ಜೆಡಿಯು ಬಳಿ ಏಳು ಮಂದಿ ಶಾಸಕರು ಇದ್ದಾರೆ. ಕಾಂಗ್ರೆಸ್ ಮತ್ತು ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ತಲಾ ನಾಲ್ಕು ಶಾಸಕರನ್ನು ಹೊಂದಿವೆ ಮತ್ತು ಸ್ಥಳೀಯ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದ ಬಳಿ ಒಬ್ಬ ಶಾಸಕರು ಇದ್ದಾರೆ. ಮೂವರು ಸ್ವತಂತ್ರ ಸದಸ್ಯರಿದ್ದಾರೆ. ಜೆಡಿಯು ಮತ್ತು ಎನ್‌ಪಿಪಿ ಪಕ್ಷಗಳು ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದ ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳಾಗಿವೆ.

ಜೂನ್ 19ರಂದು ಮಣಿಪುರ, ಮೇಘಾಲಯ ಮತ್ತು ಮಿಜೋರಾಂನ ತಲಾ ಒಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಎನ್‌ಪಿಪಿ ಕ್ರಮವಾಗಿ ಮಣಿಪುರ ಮತ್ತು ಮೇಘಾಲಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿದ್ದರೆ, ಸ್ಥಳೀಯ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಮಿಜೋರಾಂ ಅನ್ನು ಆಳುತ್ತಿದೆ.

***ಕೇರಳ ಶ್ರೀ ರಾಜರಾಜೇಶ್ವರಿ ಜೋತಿಷ್ಯ ಪೀಠ***

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು( ಖ್ಯಾತ ತಂತ್ರಿಗಳು)-9731901464

ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇರಳ ಅಥರ್ವಣ ವೇದದ ಮೂಲ ಮಂತ್ರ ಸಿದ್ದಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸ್ತ್ರೀ ಪುರುಷ ವಶೀಕರಣ, ಪ್ರೀತಿ-ಪ್ರೇಮದ ಸಮಸ್ಯೆ, ಸತಿ-ಪತಿ ಕಲಹ, ಅನಾರೋಗ್ಯ, ಮನಶಾಂತಿಯ ಕೊರತೆ, ಸಾಲದ ಭಾದೆ, ಮದುವೆ ವಿಳಂಬ, ಶತ್ರು ಭಾದೆ, ಉದ್ಯೋಗ, ವ್ಯವಹಾರದಲ್ಲಿ ನಷ್ಟ, ಇಂದೇ ಸಂಪರ್ಕಿಸಿ ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರು ( ಖ್ಯಾತ ತಂತ್ರಿಗಳು) -9731901464

ದೈವಜ್ಞ ಶ್ರೀ ಶ್ರೀ ಸಿದ್ದಾರ್ಥ ಭಟ್ಟರನ್ನು ಕೂಡಲೇ ಸಂಪರ್ಕಿಸಲು Call Now ಬಟನ್ ಕ್ಲಿಕ್ ಮಾಡಿ