ಇದೀಗ ಬಂದ ಸುದ್ದಿ: ಕೊರೊನಾ ಸಮಯದಲ್ಲಿ ಜನರಿಗಾಗಿ ದೇಶವೇ ಮೆಚ್ಚುವಂತಹ ಕಾರ್ಯ ಮಾಡಿದ ಸಂಸದ ತೇಜಸ್ವಿ ಸೂರ್ಯ.?

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಆನ್‌ಲೈನ್‌ನಲ್ಲಿಯೇ ಭೇಟಿಯಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಪರೂಪದ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಕೊರೊನಾ ವೈರಸ್ ನಗರದಲ್ಲಿ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಸದರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ, ತಾತ್ಕಾಲಿಕವಾಗಿ ಈ ಆರೋಗ್ಯಕರ ಭೇಟಿಯನ್ನು ಮಾಡಲು ತೇಜಸ್ವಿ ಸೂರ್ಯ ನಿರ್ಧರಿಸಿದ್ದಾರೆ.

ಆನ್‌ಲೈನ್ ಮೂಲಕವೇ ಸಾರ್ವಜನಿಕರನ್ನು ಭೇಟ ಮಾಡಿ, ಅವರ ಕುಂದುಕೊರತೆಗಳನ್ನು ತೇಜಸ್ವಿ ಸೂರ್ಯ ಆಲಿಸಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಇ-ಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಕೆಲವು ಲಿಂಕ್‌ಗಳನ್ನು ನೀಡಲಾಗಿದ್ದು ಇದರ ಮೂಲಕ ಸಾರ್ವಜನಿಕರು ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಮನವಿಯೊಂದನ್ನು ಮಾಡಿದ್ದು , ಯಾರೂ ಈ ಲಿಂಕ್‌ಗಳನ್ನು ದುರುಪಯೋಗಪಡಿಸಿಕೊಂಡು ಅನಗತ್ಯವಾಗಿ ಹೆಸರು ನೋಂದಾಯಿಸಿಕೊಳ್ಳಕೂಡದು ಎಂದು ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 'ವರ್ಚುವಲ್ ಕಾನ್ಫರೆನ್ಸ್' ವೇದಿಕೆ ಮೂಲಕ ಸಂಸದ ತೇಜಸ್ವೀ ಸೂರ್ಯ ರೊಂದಿಗೆ ಆನ್ ಲೈನ್ ಅಪಾಯಿಂಟ್ಮೆಂಟ್ ನಿಗದಿಪಡಿಸಿ ಪರಿಹಾರ ಕಂಡುಕೊಳ್ಳಲು ಬೆಂಗಳೂರು ದಕ್ಷಿಣ ಸಂಸದರ ಕಚೇರಿ ನಿರ್ಧರಿಸಿದ್ದು, ಸಾರ್ವಜನಿಕರು ತಮ್ಮ ತುರ್ತು ಅಗತ್ಯತೆಗಳನ್ನು ಈ 'ವರ್ಚುವಲ್ ಕಾನ್ಫರೆನ್ಸ್' ಮೂಲಕ ಬಗೆಹರಿಸಿಕೊಳ್ಳಲು ಈ ಕೆಳಕಂಡ ಲಿಂಕ್ ನಲ್ಲಿ ತಮ್ಮ ವಿವರಗಳನ್ನು ನಮೂದಿಸಿಕೊಳ್ಳುವುದರೊಂದಿಗೆ ನೇರವಾಗಿ ಸಂಸದರನ್ನು ಸಂಪರ್ಕಿಸಬಹುದು. ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ತುರ್ತು ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಡವು ಈ-ಮೇಲ್,ಫೋನ್ ಮೂಲಕ ಸಮಯ ನಿಗದಿಗೊಳಿಸಲಿದ್ದು, ಸಂಸದರೊಂದಿಗೆ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕುಬುದುಕೊರತೆಗಳ ನಿವಾರಣೆಗೆ ವ್ಯವಸ್ಥೆ ಮಾಡಿಕೊಡಲಾಗುವುದು. ತುರ್ತು ಸಮಸ್ಯೆಗಳಿದ್ದಲ್ಲಿ ಮಾತ್ರ ವರ್ಚುವಲ್ ಕಾನ್ಫರೆನ್ಸ್ ಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ. ಈ ಕೆಳಕಂಡ ಫಾರ್ಮ್ ಅನ್ನು ತುಂಬುವ ಮೂಲಕ ಆನ್ ಲೈನ್ ಅಪಾಯಿಂಟ್ಮೆಂಟ್ ಪಡೆದುಕೊಳ್ಳಬಹುದು:

Comments