ಇದೀಗ ಬಂದ ಸುದ್ದಿ: ಸಿಎಂ ಯಡಿಯೂರಪ್ಪನವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಜೆಡಿಎಸ್ ನಾಯಕ

ಹಾಸನಕ್ಕೆ ನಿಗದಿಯಾಗಿದ್ದ ತೋಟಗಾರಿಕಾ ಕಾಲೇಜ್ ಅನ್ನು ಸರಕಾರ ರದ್ದು ಪಡಿಸಿರುವುದಕ್ಕೆ ಶಾಸಕ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಸಿಎಂ ಯಡಿಯೂರಪ್ಪನವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

"ಯಡಿಯೂರಪ್ಪ ರದ್ದು ಮಾಡಿದರೆ ಏನಾಯಿತು, ನನಗೆ ಹೇಗೆ ಕೆಲಸ ಮಾಡಬೇಕು ಗೊತ್ತು ಕಣಯ್ಯಾ, ನಾನೇನು ಸುಮ್ಮನೆ ಕೂತಿಲ್ಲ. ಯಡಿಯೂರಪ್ಪ ಏನು ಶಾಸ್ವತವಾಗಿ ಇರ್ತಾನಾ"ಎಂದು ರೇವಣ್ಣ ಕಿಡಿಕಾರಿದ್ದಾರೆ.

"ನಾನು ಬದುಕಿದ್ದಾಗಲೇ ಹಾಸನಕ್ಕೆ ಕಾಲೇಜು ತಂದೇ ತರುತ್ತೇನೆ. ಈ ದೇವೇಗೌಡರ ಕುಟುಂಬದ ಬಗ್ಗೆ ಗೊತ್ತಿಲ್ಲವೇ" ಎಂದು ಪ್ರಶ್ನಿಸಿರುವ ರೇವಣ್ಣ, "ಕಾಲೇಜು ರದ್ದು ಮಾಡಿದರೆ, ನಾನೇನು ಹೆದರಿಕೊಂಡು ಓಡಿ ಹೋಗುತ್ತೀನಾ"ಎಂದು ರೇವಣ್ಣ ಸವಾಲು ಎಸೆದಿದ್ದಾರೆ.

"ಹಾಸನ ಬಜೆಟ್, ಮಂಡ್ಯ ಬಜೆಟ್ ಎಂದು ವ್ಯಂಗ್ಯವಾಡುತ್ತಿದ್ದವರು ಈಗ ಎಲ್ಲಿದ್ದಾರೆ. ಇದು ಯಡಿಯೂರಪ್ಪನವರಿಗೆ ಒಳ್ಳೆಯದಲ್ಲ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ, ಈಗ ಮಾಡುತ್ತಿರುವುದೇನು"ಎಂದು ರೇವಣ್ಣ ಗರಂ ಆಗಿದ್ದಾರೆ.

"ನಾನು ಹೆದರಿಕೊಂಡು ಸುಮ್ಮನೆ ಕೂತಿದ್ದೀನಿ ಎಂದು ಅವನು ಅಂದುಕೊಂಡಿರಬಹುದು. ಆದರೆ, ನನಗೆ ಇದನ್ನೆಲ್ಲಾ ಎದುರಿಸುವ ಶಕ್ತಿ ಭಗವಂತ ಕೊಟ್ಟಿದ್ದಾನೆ"ಎಂದು ರೇವಣ್ಣ, ಸಿಎಂ ಬಿಎಸ್ವೈ ವಿರುದ್ದ ಏಕವಚನದಲ್ಲಿ ಹರಿಹಾಯ್ದಿದಿದ್ದಾರೆ.

"ಯಡಿಯೂರಪ್ಪನವರಿಗೆ ವಯಸ್ಸಾಗಿರುವ ಈ ಕಾಲದಲ್ಲಿ ಯಾಕೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಪಂಚಾಯತಿಗೆ 23 ಕೋಟಿ ಅನುದಾನ ಬಂದು, ಆಮೇಲೆ ಸ್ಟಾಪ್ ಆಯಿತು. ಈ ದ್ವೇಷ ಹಾಸನ ಜಿಲ್ಲೆಯ ಮೇಲೆ ಯಾಕೆ"ಎಂದು ರೇವಣ್ಣ, ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

Comments