ಹುಚ್ಚವೆಂಕಟ್ ಗೆ ಮಾನವೀಯತೆ ಮರೆತು ಥಳಿಸಿದ ಜನ: ವಿಡಿಯೋ ನೋಡಿ

ಒಂದು ಕಾಲದಲ್ಲಿ ಯೂ ಟ್ಯೂಬ್ ಮೂಲಕ ಸಂಚಲನ ಸೃಷ್ಟಿಸಿ ಹವಾ ಎಬ್ಬಿಸಿದ್ದ ಹುಚ್ಚ ವೆಂಕಟ್ ತನ್ನ ಡಿಫರೆಂಟ್ ಮ್ಯಾನರಿಸಂ ಮೂಲಕವೇ ಬಿಗ್ ಬಾಸ್ ಗೆ ಎಂಟ್ರಿಕೊಟ್ಟ ವೆಂಕಟ್ ಸಾಲು ಸಾಲು ಕಿರಿಕ್ ಗಳ ಮೂಲಕ ಅದೇ ಬಿಗ್ ಬಾಸ್ ನಿಂದ ಹೊರನಡೆಯುವಂತಾಯಿತು. ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಹುಚ್ಚವೆಂಕಟ್ ಫೈರಿಂಗ್ ಸ್ಟಾರ್ ಎಂದೇ ಖ್ಯಾತಿಗಳಿಸಿದ್ದರು.

ಮಾಧ್ಯಮಗಳಲ್ಲಿ ಲೈವ್ ಡಿಬೆಟ್ ಗಳಲ್ಲಿ ಕೂತು ನೇರ ಮಾತುಗಳಲ್ಲಿ ಜನರನ್ನು ಮನರಂಚಿಸುತ್ತಿದ್ದರು ಅದರೆ ಕಾಲಕ್ರಮೇಣ ಜನರಿಗೆ ಅದೇ ಮಾತು ಕಿರಿಕಿರಿ ಎಂದೇನಿಸಿತು. ಅದರೆ ಕಳೆದ ಎರಡು ವರ್ಷಗಳಿಂದ ಹುಚ್ಚವೆಂಕಟ್ ರ ರಂಪಾಟ ಅತಿಯಾಗಿ ಜನರಿಂದ ಹಲವಾರು ಬಾರಿ ಗೂಸ ತಿಂದು ಪ್ರತಿಯೊಬ್ಬರ ಕೆಂಗಣ್ಣಿಗೆ ಗುರಿಯಾಗಿದ್ದರೆ. ಈಗ ಮತ್ತೊಂದು ಅಂತಹದ್ದೆ ಘಟನೆ ನಡೆದಿದೆ.

ಹೌದು, ಮಂಡ್ಯ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹುಚ್ಚವೆಂಕಟ್ ಮೇಲೆ ಆಗಿರುವ ಹಲ್ಲೆ ವಿಡಿಯೋ ವೈರಲ್ ಆಗಿದ್ದು. ಕನ್ನಡ ಚಿತ್ರರಂಗದ ಖ್ಯಾನಾಮರು ಈ ವಿಡಿಯೋ ನೋಡಿ ಮರುಕ ವ್ಯಕ್ತಪಡಿಸಿದ್ದಾರೆ.

Comments