ಇದೀಗ ಬಂದ ಸುದ್ದಿ: ಅದೃಷ್ಟದ ಮೇಲೆ ಅದೃಷ್ಟ ಪಡೆದ ಎಂ ಟಿ ಬಿ ನಾಗರಾಜ್ ಗೆ ಒಳಿಯಲಿದೆ ಮತ್ತೊಂದು ಅದೃಷ್ಟ

ರಾಜಕೀಯ ನಿಂತ ನೀರಲ್ಲ ಎಂಬುದು ಬಹಳ ಹಳೆಯ ಮಾತದರು ಪ್ರಸ್ತುತ ರಾಜಕೀಯದಲ್ಲಿ ಅದು ನಿಜವಾದ ಮಾತು ಹೌದು, ರಾಜಕೀಯದಲ್ಲಿ ದಿನ ಬೆಳಗಾಗುವ ಮುಂಚೆ ಯಾವುದೋ ಸರ್ಕಾರವೂ ಆಸ್ತಿತ್ವಕ್ಕೆ ಬರಬಹುದು ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪರಮ ಆಪ್ತರೆಂದು ಗುರುತಿಸಿಕೊಂಡಿದ್ದಾ ಎಂ ಟಿ ಬಿ ನಾಗರಾಜ್ ಅವರು ಬಿಜೆಪಿ ಸೇರ್ಪಡೆಗೊಂಡಿರುವುದು ನಮಗೆಲ್ಲ ತಿಳಿದಿರುವ ವಿಷಯ.

ಉಪಚುನಾವಣೆಯಲ್ಲಿ ಸೋಲು ಕಂಡರು, ಸದ್ಯ ವಿಧಾನಪರಿಷತ್ ಗೆ ಆಯ್ಕೆಯಾಗುವ ಮೂಲಕ ತಮ್ಮ ವರ್ಚಸ್ಸನ್ನು ಉಳಿಸಿಕೊಂಡಿರುವ ಕೋಟಿ ವೀರ ಎಂಟಿಬಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಲೆ ಇದೆ. ಹೌದು, ಮುಂದಿನ ಸಚಿವ ಸಂಪುಟ ವಿಸ್ತರಣೆಯ ಸಂಧರ್ಭದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ದೇಶದಲ್ಲಿನ ಅತಿ ಶ್ರೀಮಂತ ರಾಜಕಾರಣಿ ಎಂಬ ಹೆಗ್ಗಳಿಕೆಗೆ  ಹೆಸರುವಾಸಿ ಆಗಿರುವ ಬಿಜೆಪಿ ಪಕ್ಷದ ರಾಜಕಾರಣಿ MTB ನಾಗರಾಜ್ ಅವರು ಅದೃಷ್ಟದ ಬಾಗಿಲಿನ ಸನಿಹದಲ್ಲಿ ನಿಂತಿದ್ದಾರೆ ಇದೀಗ MTB ನಾಗರಾಜ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಾಗಿ BS ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

Comments