ಕನ್ನಡಿಗರು ಹೆಮ್ಮೆ ಪಡುವಂತಹ ಕೆಲಸ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ

ಅಭಿಮಾನಿಗಳ ಅಭಿಮಾನಿಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ತಮ್ಮ ಸಾಮಾಜಿಕ ಕಾರ್ಯಗಳಿಂದ ಅಭಿಮಾನಿಗಳ ಆರಾಧ್ಯ ದೈವವು ಆಗಿದ್ದಾರೆ. ತಾವೆಲ್ಲೂ ಕಾಣಿಸಿಕೊಳ್ಳದೇ ಅಭಿಮಾನಿಗಳನ್ನೇ ಮುಂದೆ ಬಿಟ್ಟು ಕಷ್ಟ ಎಂದವರಿಗೆ ಸಹಾಯ ಮಾಡುವುದು ಕಿಚ್ಚನ ದೊಡ್ಡ ಗುಣ ಎಂದರೆ ತಪ್ಪಾಗಲಾರದು.

ಹೌದು, ಮತ್ತೊಮ್ಮೆ ಮಾನವೀಯತೆ ಮೆರೆದಿರುವ ನಟ ಕಿಚ್ಚ ಸುದೀಪ್, ಪುಟ್ಟ ಮಗುವಿನ ಕನಸಿಗೆ ನೀರೆರೆದಿದ್ದಾರೆ. ಮಗುವೊಂದನ್ನು ದತ್ತು ಪಡೆದು ಅದರ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಸ್ಯಾಂಡಲ್​ವುಡ್​​ ಮಾಣಿಕ್ಯ ನೆರವಾಗಿದ್ದಾರೆ

ಆರನೇ ತರಗತಿ ಓದುತ್ತಿರುವ ಮಗು ಕನೀಷಾ, ಬೆಂಗಳೂರಿನ ನಾಗದೇವನಹಳ್ಳಿಯ ಬಡ ಕುಟುಂಬದ ಮಗು. ಲಾಕ್​ಡೌನ್ ಎಫೆಕ್ಟ್​ನಿಂದ ಸಂಕಷ್ಟದಲ್ಲಿ ಸಿಲುಕಿದ್ದ ಕನೀಷಾ ಕುಟುಂಬಕ್ಕೆ ಕಿಚ್ಚ ಆಸರೆಯಾಗಿದ್ದಾರೆ.

ಕನೀಷಾ ತಂದೆಯಿಲ್ಲದೆ ತಾಯಿಯ ಮಡಿಲಲ್ಲಿ ಬೆಳೆಯುತ್ತಿದೆ. ಮಗುವಿನ ಫೀಸ್​ ಕಟ್ಟಲಾಗದೇ ಆಕೆಯ ತಾಯಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆಹೋಗಿದ್ದರು. ಕೂಡಲೇ ಕನೀಷಾ ತಾಯಿಯ ಮನವಿಗೆ ಸ್ಪಂದಿಸಿದ ಸುದೀಪ್ ಮತ್ತು ತಂಡ ಮಗುವನ್ನು ದತ್ತು ಪಡೆದು, ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. 

Comments