ಸ್ಪೋಟಕ ಬ್ರೇಕಿಂಗ್: ವಿಧಾನಪರಿಷತ್ ಚುನಾವಣೆ ಬಿಜೆಪಿಯ ಸಂಭಾವ್ಯ ಆಭ್ಯರ್ಥಿಗಳ ಪಟ್ಟಿ

ವಿಧಾನಪರಿಷತ್ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದ್ದು ಕಾಂಗ್ರೆಸ್ ಪಕ್ಷದ 5, ಜೆಡಿಎಸ್ ಒಂದು ಮತ್ತು ಒಬ್ಬರು ಪಕ್ಷೇತರ ಶಾಸಕರ ಅವಧಿ ಮುಕ್ತಾಯವಾಗಿದೆ. ಈಗ ಬಿಜೆಪಿಗೆ 4, ಕಾಂಗ್ರೆಸ್ಗೆ ಎರಡು ಮತ್ತು ಜೆಡಿಎಸ್ ಗೆ ಒಂದು ಸ್ಥಾನ ಸಿಗಲಿದೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದ ಎಂಟಿಬಿ ನಾಗರಾಜ್, ಆರ್. ಶಂಕರ್ ಮತ್ತು ಹೆಚ್. ವಿಶ್ವನಾಥ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಮೂವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದ್ದರೂ ಬಹುತೇಕ ಅವರಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.

ಅದೇ ರೀತಿ ಬಿಜೆಪಿಯಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಮಾಲಿಕಯ್ಯ ಗುತ್ತೇದಾರ್, ಸುನಿಲ್ ವಲ್ಯಾಪುರೆ, ನಿರ್ಮಲ್ ಕುಮಾರ್ ಸುರಾನ ಹಲವರು ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.

Comments