ಸ್ಪೋಟಕ ಬ್ರೇಕಿಂಗ್: ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಭರ್ಜರಿ ಗಿಫ್ಟ್ ನೀಡಿದ ಮೋದಿ ಸರ್ಕಾರದೇಶದ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ಸಿಬ್ಬಂದಿಗೆ ಸರ್ಕಾರ ದೊಡ್ಡದೊಂದು ಶುಭ ಸುದ್ದಿ ನೀಡಿದೆ.  ರಸ್ತೆ  ನಿರ್ಮಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕೆಲಸ ಮಾಡುತ್ತಿರುವವರ ವೇತನವನ್ನು ಶೇ. 100 ರಿಂದ 170 ರಷ್ಟು ಹೆಚ್ಚಳ ಮಾಡಿದೆ.

ಲಡಾಕ್ ಸೆಕ್ಟರ್ ನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವವರಿಗೆ ಅತಿ ಹೆಚ್ಚಿನ ಸಂಬಳ ಏರಿಕೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದರಿ ನಿರ್ಮಾಣ ಪ್ರಾಧಿಕಾರ ಅಧಿಕೃತ ಆದೇಶ ಹೊರಡಿಸಿದ್ದು  ಜೂ. 1 ರಿಂದ ಕಾರ್ಯಗತವಾಗಿದೆ. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲ  ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವವರಿಗೆ ರಿಸ್ಕ್ ಅಲೋವೆನ್ಸ್ ಅನ್ನು ಹೆಚ್ಚಳ ಮಾಡಲಾಗಿದೆ.

ಹೊಸ ಸ್ಯಾಲರಿ ಹೈಕ್ ನಂತರ ನಾನ್ ಟೆಕ್ನಿಕಲ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದವನ ಸಂಬಳ 16,770  ರೂ. ನಿಂದ  47,360 ರೂ ಗೆ ಏರಿಕೆಯಾಗಿದೆ.  ಇದೆ ವ್ಯಕ್ತಿಗೆ ದೆಹಲಿಯಲ್ಲಿ  28,000 ರೂ. ದೊರೆಯುತ್ತದೆ. ಅಕೌಂಟೆಂಟ್ ಸಂಬಳ 25,700 ದಿಂದ 47,360 ಕ್ಕೆ ಏರಿಕೆಯಾಗಿದೆ. ಸಿವಿಲ್ ಇಂಜಿನಿಯಯರ್ 30 ಸಾವಿರದ ಬದಲಾಗಿ  60 ಸಾವಿರ ರೂ. ಪಡೆದುಕೊಳ್ಳಲಿದ್ದಾರೆ. ಸೀನಿಯರ್ ಮ್ಯಾನೇಜರ್ 50 ಸಾವಿರದ ಬದಲಾಗಿ 1,23,600 ರೂ. ಪಡೆದುಕೊಳ್ಳಲಿದ್ದಾರೆ.

ಈ ರೀತಿ ಕೆಲಸ ಮಾಡುವವರನ್ನು ಮೂರು ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಅಸ್ಸಾಂ, ಮೇಘಾಲಯ, ತ್ರಿಪುರಾ, ಸಿಕ್ಕಿಂ ಮತ್ತು ಉತ್ತರಾಖಂಡದಲ್ಲಿ ಕೆಲಸಮಾವುವವರು ಒಂದು ವರ್ಗ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಿಝೋರಾಂ ಮತ್ತು ನಾಗಾಲ್ಯಾಂಡನಲ್ಲಿ ಕಾರ್ಯನಿರ್ವಹಿಸುವವರು ಒಂದು ವರ್ಗ ಅತಿ ಹೆಚ್ಚಿನ ರಿಸ್ಕ್ ಇರುವ ಲಡಾಕ್ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವನ್ನು.

Comments