ಸ್ಪೋಟಕ ಬ್ರೇಕಿಂಗ್: ಮತ್ತೊಂದು ಮೆಗಾ ಸಂಧಾನ ನಡೆಸಿದ ಅಮಿತ್ ಶಾ.!ಬಿಜೆಪಿ ಸರ್ಕಾರ ಸೇಫ್.?

ಶಾಸಕರ ರಾಜೀನಾಮೆಯಿಂದಾಗಿ ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಸದ್ಯ ಅಪಾಯದದಿಂದ ಪಾರಾಗಿದೆ. ಮೇಘಾಲಯ ಮುಖ್ಯಮಂತ್ರಿಯೂ ಆಗಿರುವ ಎನ್‌ಪಿಪಿ ನಾಯಕ ಕಾನ್ರಾಡ್‌ ಸಂಗ್ಮಾ ಹಾಗೂ ರಾಜೀನಾಮೆ ನೀಡಿದ್ದ ಉಪಮುಖ್ಯಮಂತ್ರಿ ವೈ. ಜಾಯ್‌ಕುಮಾರ್‌ ಸಿಂಗ್‌ ಅವರು ದೆಹಲಿಯಲ್ಲಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಣಿಪುರದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಕಾನ್ರಾಡ್‌ ಅವರು ತಿಳಿಸಿದರು. ರಾಜೀನಾಮೆ ನೀಡಿದ್ದ ಎಲ್ಲ 9 ಶಾಸಕರನ್ನೂ ದೆಹಲಿಗೆ ಕರೆತರಲಾಗಿತ್ತು.

ಕಳೆದ ವಾರ ಎನ್‌ಪಿಪಿಯ ನಾಲ್ವರು ಹಾಗೂ ಬಿಜೆಪಿಯ ಮೂವರು ಶಾಸಕರು ರಾಜೀನಾಮೆ ನೀಡಿ, ಬೀರೇನ್‌ ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿತ್ತು. ಹೀಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದು, ಕಾಂಗ್ರೆಸ್‌ ಹಕ್ಕು ಮಂಡನೆ ಮಾಡಿತ್ತು. ಸದ್ಯಕ್ಕೆ ಬಿಜೆಪಿ ಸರ್ಕಾರ ಸೇಫ್ ಆಗಿದೆ.

Comments