ಬಿಗ್ ಬ್ರೇಕಿಂಗ್: ಕರ್ನಾಟಕದಲ್ಲಿ ಐತಿಹಾಸಿಕ ಕಾರ್ಯಕ್ಕೆ ಮುಂದಾದ ಬಿಜೆಪಿ ಹೈಕಮಾಂಡ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜೂನ್ 14ರಂದು ಬಿಜೆಪಿಯು ಕರ್ನಾಟಕ ಜನಸಂವಾದ ಕಾರ್ಯಕ್ರಮವನ್ನು ವರ್ಚುವಲ್‌ ಆಗಿ ನಡೆಸಲಿದೆ. ಈ ಸಂದರ್ಭ ‘ಸಮರ್ಥ ನಾಯಕತ್ವ, ಸ್ವಾವಲಂಬಿ ಭಾರತ ಅಭಿಯಾನ’ ದ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕರ್ನಾಟಕದ ಸುಮಾರು 20 ಲಕ್ಷ ಮಂದಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಮೋದಿ ಅವರ ನಾಯಕತ್ವದ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಸಾಧನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಲಕ್ಷಾಂತರ ಜನರನ್ನು ತಲುಪುವ ಸಲುವಾಗಿ ಈಗಾಗಲೇ ಪೂರಕ ಕಾರ್ಯಯೋಜನೆಗಳನ್ನೂ ಬಿಜೆಪಿ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಕಣ್ಣಿಗೆ ಕಾಣದ ಕೊರೋನಾ ಎಂಬ ಮಹಾಮಾರಿಯಿಂದ ಜನರು ವಹಿಸಬೇಕಾದ ಎಚ್ಚರಿಕೆಯ ಕುರಿತಾಗಿಯೂ ಮಾಹಿತಿ ನೀಡಲಿದ್ದಾರೆ.

ಸಮರ್ಥ ನಾಯಕತ್ವ, ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ 37 ಜಿಲ್ಲೆಗಳಲ್ಲಿ ಬಿಜೆಪಿ ಜಾಗೃತಿ ಅಭಿಯಾನ ನಡೆಸಲಿದೆ. ಜೂನ್ 6 ರಿಂದ ಆರಂಭಿಸಲಾದ ಸಮಾವೇಶ ಜೂನ್ 25 ರವರೆಗೆ ನಡೆಯಲಿದ್ದು, 600 ಕ್ಕೂ ಹೆಚ್ಚು ಸಮಾವೇಶಗಳ ಮೂಲಕ ಕೋಟಿಗೂ ಅಧಿಕ ಜನರನ್ನು ತಲುಪುವ ಗುರಿ ಹೊಂದಲಾಗಿದೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭ ಭಾರತದಲ್ಲಿ ಸ್ವದೇಶಿ ವಸ್ತುಗಳ ಬಳಕೆಯನ್ನು ಹೆಚ್ಚಿಸುವಂತೆ ಮತ್ತು ಚೀನಾ ವಸ್ತುಗಳ ಬಳಕೆ ನಿಲ್ಲಿಸುವಂತೆ ಜಾಗೃತಿ ಅಭಿಯಾನ ಜೂನ್ 14 ರಂದು ರಾತ್ರಿ 7-8 ರವರೆಗೆ ನಡೆಯಲಿದೆ. ಸ್ಥಳೀಯ ವಸ್ತುಗಳಿಗೆ, ಸ್ವದೇಶಿ ವಸ್ತುಗಳಿಗೆ ಬೆಂಬಲ ನೀಡುವುದು ಮತ್ತು ಚೀನಾ ವಸ್ತುಗಳನ್ನು ಬಹಿಷ್ಕರಿಸುವ ದೃಷ್ಟಿಯಿಂದ ಈ ಅಭಿಯಾನ ನಡೆಸಲಾಗುತ್ತದೆ. ‘ಭಾರತ ಗೆಲ್ಲಿಸೋಣ, ಚೀನಾ ಸೋಲಿಸೋಣ’ ಘೋಷವಾಕ್ಯದಂತೆ, ದೇಶೀಯ ವಸ್ತುಗಳ ಬಳಕೆಗೆ ಉತ್ತೇಜನ, ಆ ಮೂಲಕ ದೇಶದ ಆರ್ಥಿಕತೆಗೆ ಪುನಃಶ್ಚೇತನ ನೀಡುವತ್ತ ಜನರ ಚಿತ್ತ ಹೊರಳುವಂತೆ ಮಾಡುವುದೇ ಈ ಅಭಿಯಾನದ ಉದ್ದೇಶ ಎಂದು ಬಿಜೆಪಿ ತಿಳಿಸಿದೆ. 58 ಸಾವಿರ ಬೂತ್‌ಗಳ 50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗಾಂಧೀಜಿ ಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಸ್ವದೇಶಿ ಸಂಕಲ್ಪ ನಡೆಸಲಿರುವುದಾಗಿಯೂ ರಾಜ್ಯ ಬಿಜೆಪಿ ಮಾಹಿತಿ ನೀಡಿದೆ.

Comments