ಮೆಗಾ ಬ್ರೇಕಿಂಗ್: ಸಂಪುಟ ವಿಸ್ತರಣೆಯ ಕುರಿತು ಬ್ರೇಕಿಂಗ್ ನ್ಯೂಸ್ ಕೊಟ್ಟ ಸಚಿವ ಈಶ್ವರಪ್ಪ

ಯಡಿಯೂರಪ್ಪನವರ ಸರಕಾರದ ಸಂಪುಟ ವಿಸ್ತರಣೆಯ ಬಗ್ಗೆ ಗ್ರಾಮೀಣಾಭಿವೃದ್ದಿ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಜಿಲ್ಲೆಯ ಹೊಳಲ್ಕೆರೆಯಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಈಶ್ವರಪ್ಪ,"ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆಯಾಗಲಿದೆ"ಎಂದು ಹೇಳಿದರು.

"ಮುಂದಿನ ತಿಂಗಳು ಸಂಪುಟದಲ್ಲಿ ಹಲವು ಬದಲಾವಣೆಯಾಗಲಿದೆ. ಅನುಭವಿ ಶಾಸಕರಿಗೆ ಸಚಿವ ಸ್ಥಾನ ಖಂಡಿತ ಸಿಗಲಿದೆ. ನಿಷ್ಠರನ್ನು ಪಕ್ಷ ಯಾವುತ್ತೂ ಮರೆಯುವುದಿಲ್ಲ"ಎಂದು ಈಶ್ವರಪ್ಪ ಹೇಳಿದರು. "ಕ್ಷೇತ್ರದ ಶಾಸಕ ಎಂ.ಚಂದ್ರಪ್ಪನವರಿಗೆ ಎಲ್ಲಾ ಅರ್ಹತೆಗಳಿದೆ. ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಅದ್ಯಾಕೆ ಸ್ಥಾನ ತಪ್ಪಿತೋ ಗೊತ್ತಿಲ್ಲ. ಈ ಬಾರಿ ಅವರು ಸಚಿವರಾಗುವುದು ಖಂಡಿತ"ಎಂದು ಈಶ್ವರಪ್ಪ ಎಂದು ಹೇಳಿದರು.

"ಬಿಜೆಪಿಯಲ್ಲಿರುವ ಎಲ್ಲಾ ಕಾರ್ಯಕರ್ತರಿಗೂ ಎಂಎಲ್ಸಿ ಟಿಕೆಟ್ ಕೇಳುವ ಅರ್ಹತೆ ಇದೆ. ಜಾತಿವಾರು ಟಿಕೆಟ್ ‌ಕೊಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ವರ್ಚಸ್ಸು ಕುಂದುತ್ತದೆ ಎನ್ನುವುದು ಮಾಧ್ಯಮಗಳ ಭ್ರಮೆಯಷ್ಟೇ" ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದರು. ಹೇಳಿದರು. "ಕೇಂದ್ರದ ನಾಯಕರು ಪ್ರಮುಖ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ. ಜೂನ್ 15 ರಂದು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ" ಎಂದು ಈಶ್ವರಪ್ಪ ಹೇಳಿದರು.

Comments