ಗಡಿಯಲ್ಲಿ ಅನವಶ್ಯಕ ಉಪದ್ರವ ನೀಡುವ ತನ್ನ ಚಾಳಿ ಬಿಡದ ಚೀನಿ ಸೈನಿಕರು, ಸಿಕ್ಕಿಂ ಗಡಿಯಲ್ಲಿ ಉದ್ಧಟತನ ಮೆರೆದ ಘಟನೆ ನಡೆದಿದೆ. ಚೀನಿ ಸೈನಿಕರ ಉಪಟಳಕ್ಕೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರವನ್ನೇ ನೀಡಿದ್ದಾರೆ.
ಸಿಕ್ಕಿಂ ನ ನಾಕು ಲಾ ಗಡಿ ಬಳಿ ವಿನಾಕಾರಣ ತಗಾದೆ ತೆಗೆದ ಚೀನಿ ಸೈನಿಕರು, ಭಾರತೀಯ ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಭಾರತೀಯ ಸೇನೆ, ಚೀನಿ ಸೈನಿಕರನ್ನು ಗಡಿಯಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದಾರೆ.
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ
>
ಏಕಾಏಕಿ ಗಡಿಗೆ ನುಗ್ಗಿದ ಚೀನಿ ಸೈನಿಕರ ಗುಂಪು, ಭಾರತೀಯ ಸೈನಿಕರೊಂದಿಗೆ ವಿನಾಕಾರಣ ಜಗಳಕ್ಕಿಳಿದಿದ್ದಲ್ಲದೇ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೈನಿಕರು, ದೈಹಿಕ ಬಲದ ಮೂಲಕವೇ ಚೀನಿ ಸೈನಿಕರನ್ನು ಹೊರದಬ್ಬಿದ್ದಾರೆ. ಭಾರತ-ಚೀನಾ ಸೇನೆ ನಡುವಿನ ಈ ತಿಕ್ಕಾಟ ತಾತ್ಕಾಲಿಕವಾಗಿತ್ತು ಎಂದು ಭಾರತೀಯ ಸೇನೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ
>
ಪರಸ್ಪರ ಕೈ ಕೈ ಮಿಲಾಯಿಸಿದ ಉಭಯ ದೇಶಗಳ ಸೈನಿಕರು, ಕಲ್ಲುತೂರಾಟವನ್ನೂ ನಡೆಸಿದ್ದಾರೆ ಎಂದು ಸೇನೆ ತಿಳಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ.
ಕಳೆದ ಆಗಸ್ಟ್ 2017ರಲ್ಲಿ ಪ್ಯಾಂಗೊಂಗ್ ಸರೋವರದ ಗಡಿ ಬಳಿ ಭಾರತ-ಚೀನಾ ಸೈನಿಕರ ನಡುವೆ ಅತ್ಯಂತ ಹತ್ತಿರದ ತಿಕ್ಕಾಟವಾಗಿತ್ತು. ಇದೀಗ ಸಿಕ್ಕಿಂ ಗಡಿ ಬಳಿ ಚೀನಿ ಸೈನಿಕರ ಉಪಟಳವನ್ನು ನಿಗ್ರಹಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ