ಮತ್ತೊಮ್ಮೆ ಆಪತ್ಕಾಲದ ಭಾಂದವನಾಗಿ ಭಾರತದ ಜೊತೆ ಕೈಜೋಡಿಸಿದ ರಷ್ಯಾ

ನಮಸ್ಕಾರ ಸ್ನೇಹಿತರೇ, ಭಾರತ ಹಾಗೂ ರಷ್ಯಾ ದೇಶಗಳ ಸ್ನೇಹ ಎಂಥದ್ದು ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ರಷ್ಯಾ ದೇಶಗಳು ಮತ್ತಷ್ಟು ಹತ್ತಿರವಾಗಿವೆ. ಹಲವಾರು ರಕ್ಷಣಾ ಒಪ್ಪಂದಗಳ ಜೊತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯಾವುದೇ ನಿರ್ಣಯಕ್ಕೂ ಬೆಂಬಲ ಸೂಚಿಸಿ ಭಾರತದ ನಿರ್ಧಾರಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸುವ ಮೊದಲನೇ ಸಾಲಿನ ರಾಷ್ಟ್ರಗಳಲ್ಲಿ ರಷ್ಯಾ ದೇಶ ಸ್ಥಾನ ಪಡೆದು ಕೊಂಡಿದೆ. ಇದೀಗ ಈ ಆಪ್ತ ರಾಷ್ಟ್ರ ಮತ್ತೊಮ್ಮೆ ಭಾರತದ ಸಹಾಯಕ್ಕೆ ಬಂದಿದ್ದು, ಕೋರೋನ ವಿರುದ್ಧ ಹೋರಾಟ ಮಾಡಲು ರಷ್ಯಾ ದೇಶದ ರಕ್ಷಣಾ ಇಲಾಖೆ ಭಾರತ ದೇಶದ ಜೊತೆ ಕೈ ಜೋಡಿಸಿದೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶದಲ್ಲಿ ಕೋರೋನ ವೈರಸ್ ತಡೆಗಟ್ಟಲು ಮೆಡಿಕಲ್ ಉತ್ಪನ್ನಗಳ ತಯಾರಿಕೆ ಬಾರಿ ವೇಗವಾಗಿ ನಡೆಯುತ್ತಿದೆ. ಇದಕ್ಕಾಗಿ ರಷ್ಯಾ ದೇಶದ ರಕ್ಷಣಾ ಇಲಾಖೆ ಬರೋಬ್ಬರಿ ಎರಡು ಮಿಲಿಯನ್ ಡಾಲರ್ ದೇಣಿಗೆಯನ್ನು ಪ್ರಧಾನ ಮಂತ್ರಿ ನಿಧಿಗೆ ವರ್ಗಾವಣೆ ಮಾಡಿದ್ದು, ರಷ್ಯಾ ದೇಶದ ಮಿಲಿಟರಿ ಉತ್ಪನ್ನಗಳನ್ನು ರಫ್ತು ಮಾಡುವ ಘಟಕದ ಮೂಲಕ ರಷ್ಯಾ ಸರ್ಕಾರ ಹಣ ಸಂದಾಯ ಮಾಡಿ, ಕೋರೋನ ವೈರಸ್ ವಿರುದ್ಧ ಭಾರತ ಸರ್ಕಾರದ ನಿರ್ಧಾರಗಳನ್ನು ಶ್ಲಾಘಿಸಿದೆ. ಒಟ್ಟಿನಲ್ಲಿ ಭಾರತ ದೇಶದ ಜೊತೆ ಇಂತಹ ಸಂದರ್ಭದಲ್ಲಿ ಕೈಜೋಡಿಸಿದ ಕಾರಣಕ್ಕಾಗಿ ರಷ್ಯಾ ದೇಶಕ್ಕೆ ವಿಶೇಷ ವಿಶೇಷ ವಂದನೆಗಳು.

Comments