ಭಾರತದ ಜೆಮ್ಸ್ ಬಾಂಡ್ ಅಜಿತ್ ಧೋವಲ್ ಕಾರ್ಯಕ್ಕೆ ಸಿಕ್ತು ಮತ್ತೊಂದು ಮಹಾ ಗೌರವ

ಮಣಿಪುರ ಮತ್ತು ಅಸ್ಸಾಂನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಿ ತನ್ನ ದೇಶದಲ್ಲಿ ಭೂಗತರಾಗಿದ್ದ ಈಶಾನ್ಯ ರಾಜ್ಯಗಳ 22 ಬಂಡುಕೋರರನ್ನು ಪತ್ತೆ ಮಾಡಿದ ಮ್ಯಾನ್ಮಾರ್​, ಅವರೆಲ್ಲರನ್ನೂ ಭಾರತಕ್ಕೆ ಹಸ್ತಾಂತರಿಸಿದೆ.

ಇವರೆಲ್ಲರನ್ನೂ ವಿಶೇಷ ವಿಮಾನದಲ್ಲಿ ಶುಕ್ರವಾರ ಭಾರತಕ್ಕೆ ಕರೆತರಲಾಯಿತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ಮ್ಯಾನ್ಮಾರ್​ ಮಿಲಿಟರಿಯ ಕಮಾಂಡರ್​ ಇನ್​ ಚೀಫ್​ ಮಿನ್​ ಅಂಗ್​ ಹ್ಲಾಹಿಂಗ್​ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಬಳಿಕ ಇವರೆಲ್ಲರನ್ನೂ ಬಂಧಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಜನ್ಮ ದಿನಾಂಕದಿಂದ ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಕೂಡಲೇ ಕೆಳಗಿನ Call Now ಬಟನ್ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಿ
ಭಾರತಕ್ಕೆ ಹಸ್ತಾಂತರಗೊಂಡಿರುವ 22 ಬಂಡುಕೋರರ ಪೈಕಿ 12 ಬಂಡುಕೋರರು ಮಣಿಪುರದಲ್ಲಿ ಕಾರ್ಯಾಚರಿಸುವ ಯುಎನ್​ಎಲ್​ಎಫ್​, ಪ್ರಿಪಾಕ್​ (ಪ್ರೋ), ಕೆವೈಕೆಎಲ್​ ಮತ್ತು ಪಿಎಲ್​ಎ ಬಂಡುಕೋರ ಸಂಘಟನೆಗಳಿಗೆ ಸೇರಿದವರು. ಉಳಿದ 10 ಜನರು ಅಸ್ಸಾಂನಲ್ಲಿ ಕಾರ್ಯಾಚರಿಸುವ ಎನ್​ಡಿಎಫ್​ಬಿ (ಎಸ್​) ಮತ್ತು ಕೆಎಲ್​ಒ ಬಂಡುಕೋರ ಸಂಘಟನೆಗಳಿಗೆ ಸೇರಿದವರು.

ಎನ್​ಡಿಎಫ್​ಬಿ (ಎಸ್​) ಬಂಡುಕೋರ ಸಂಘಟನೆಯ ರಾಜೆನ್​ ಡೈಮೇರಿ, ಯುಎನ್​ಎಲ್​ಎಫ್​ನ ಸನತೋಂಬಾ ನಿಂಗಥುಜಾಮ್​ ಮತ್ತು ಪ್ರಿಪಾಕ್​ (ಪ್ರೋ) ಸಂಘಟನೆಯ ಪಶುರಾಮ್​ ಲೈಷ್ರಾಂ ಭಾರತಕ್ಕೆ ಹಸ್ತಾಂತರಗೊಂಡಿರುವ ಪ್ರಮುಖ ಬಂಡುಕೋರ ನಾಯಕರಾಗಿದ್ದಾರೆ.
ಭಾರತ ಮತ್ತು ಮ್ಯಾನ್ಮಾರ್​ ನಡುವೆ ಉತ್ತಮ ಸ್ನೇಹಸಂಬಂಧವಿದೆ. ಇದೀಗ ತಿಂಗಳಿಗೂ ಹೆಚ್ಚುಕಾಲ ಶೋಧ ಕಾರ್ಯಾಚರಣೆ ನಡೆಸಿ ಭಾರತಕ್ಕೆ ತುಂಬಾ ಬೇಕಾಗಿದ್ದ ಬಂಡುಕೋರರನ್ನು ಪತ್ತೆ ಮಾಡಿ, ಹಸ್ತಾಂತರಿಸುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮ್ಯಾನ್ಮಾರ್​ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲಿಗೆ ಮಣಿಪುರದ ಇಂಪಾಲಾದಲ್ಲಿ ಇಳಿಯಲಿರುವ ವಿಶೇಷ ವಿಮಾನ, ಆ ರಾಜ್ಯಕ್ಕೆ ಬೇಕಾಗಿದ್ದ ಬಂಡುಕೋರರನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಿದೆ. ಬಳಿಕ ಅಸ್ಸಾಂನ ಗುವಾಹಟಿಯಲ್ಲಿ ಉಳಿದ ಬಂಡುಕೋರರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಿದೆ ಎಂದು ತಿಳಿಸಿದ್ದಾರೆ.

Comments