ಬಿಗ್ ನ್ಯೂಸ್: ಬಿಜೆಪಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್


ನನಗೆ ನನ್ನ ಕ್ಷೇತ್ರದ ಜನರಷ್ಟೇ ಮುಖ್ಯ, ಪಕ್ಷದ ನಾಯಕರಲ್ಲ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಗೆಲ್ಲಿಸುವುದು ನನ್ನ ಕ್ಷೇತ್ರದ ಜನ ಮಾತ್ರ. ಪಕ್ಷದ ಯಾವುದೇ ನಾಯಕರು ನನ್ನನ್ನು ಗೆಲ್ಲಿಸಲ್ಲ ಎಂದು ಡಿಕೆ ಸಹೋದರರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ. 
ನಿಮ್ಮ ಜನ್ಮ ದಿನಾಂಕದಿಂದ ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಕೂಡಲೇ ಕೆಳಗಿನ Call Now ಬಟನ್ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಿ

ನಾನು ಯಾವುದೇ ಪಕ್ಷವನ್ನು ನಂಬಿದವನಲ್ಲ. ನಮಗೆ ಪಕ್ಷಕ್ಕಿಂತ ಕಾರ್ಯಕರ್ತರು ಮುಖ್ಯ. ಅವರ ಆಶಯದಂತೆ ನಡೆಯುತ್ತೇನೆ' ಎಂದೂ ಅವರು ಹೇಳಿದರು. 'ಹಾಗಂತ ನಾನು ಕಾಂಗ್ರೆಸ್ ಬಿಡುತ್ತೇನೆ. ಬಿಜೆಪಿ ಸೇರುತ್ತೇನೆ ಎಂದು ಹೇಳಲಾರೆ. ಈಗ ಆ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ' ಎಂದರು.

ನಾಯಕರ ಅವಶ್ಯಕತೆ ಬರುವುದು ನನಗೆ ಮಂತ್ರಿ ಸ್ಥಾನದ ಅವಕಾಶ ಬಂದಾಗ ಮಾತ್ರ. ಇಲ್ಲದಿದ್ದರೆ ಕ್ಷೇತ್ರದ ಜನರೇ ಎಲ್ಲ ಎಂದು ಹೇಳಿ ಬಂಡಾಯದ ಹಾದಿಯನ್ನು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತುಳಿದಿದ್ದಾರೆ.
ನಿಮ್ಮ ಜನ್ಮ ದಿನಾಂಕದಿಂದ ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಕೂಡಲೇ ಕೆಳಗಿನ Call Now ಬಟನ್ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಿ

ನನ್ನ ಬೆಳೆಸುವುದು, ಉಳಿಸುವುದು ಕ್ಷೇತ್ರದ ಜನರು ಮಾತ್ರ. ಇತ್ತೀಚೆಗೆ ಪಕ್ಷದ ನಾಯಕರ ನಡೆ ಬೇಸರ ತರಿಸಿದೆ. ಬಿಜೆಪಿ, ಜೆಡಿಎಸ್‌ನಲ್ಲಿದ್ದಾಗ ಎರಡೂ ಪಕ್ಷಗಳನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ಆದರೆ, ಕಾಂಗ್ರೆಸ್‌ನಲ್ಲಿ ನನ್ನ ಶ್ರಮಕ್ಕೆ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.