ಡಿ ಕೆ ಶಿವಕುಮಾರ್ ಜನ್ಮ ಜಾಲಾಡಿದ ಬಿಜೆಪಿ ಮುಖಂಡ.! ಯಾರು ಬಿಜೆಪಿಯ ಆ ಪ್ರಭಾವಿ ನಾಯಕ


ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ನೀವು ಹೊಸದಾಗಿ ಕೆಪಿಸಿಸಿ ಅಧ್ಯಕ್ಷ ಆಗಿದ್ದೀರಿ ಎನ್ನುವುದು ಗೊತ್ತಿದೆ. ಹೊಸದಾಗಿ ಮದುವೆ ಆದಾಗ ಎಲ್ಲೆಲ್ಲೂ ಹೋಗಬೇಕು ಅನಿಸತ್ತೆ ಎಂದು ವ್ಯಂಗ್ಯವಾಡಿದರು. ಡಿ.ಕೆ ಶಿವಕುಮಾರ್‌ ಅವರಿಂದ ನಮ್ಮ ಸರ್ಕಾರ ನಡೆಯುತ್ತಿಲ್ಲ. ಕಾಂಗ್ರೆಸ್ ಪಕ್ಷದವರೇ ಡಿಕೆಶಿ ಮಾತು ಕೇಳಲ್ಲ. ಇನ್ನು ನಾವು ಡಿ.ಕೆ ಶಿವಕುಮಾರ್ ಮಾತು ಕೇಳ್ಬೆಕಾ..? ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇದ್ದಾರೆ. ಅವರ ಸಲಹೆ ಕೊಡಲಿ ಕೇಳ್ತೀವಿ. ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವರಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎನ್ನುವ ಮೂಲಕ ಡಿಕೆಶಿ ವಿರುದ್ಧ ಕಿಡಿಕಾರಿದರು.
ನಿಮ್ಮ ಜನ್ಮ ದಿನಾಂಕದಿಂದ ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಕೂಡಲೇ ಕೆಳಗಿನ Call Now ಬಟನ್ ಕ್ಲಿಕ್ ಮಾಡುವ ಮೂಲಕ ಸಂಪರ್ಕಿಸಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅಂತಾರೇ ಚೆಕ್​ ಮೇಲೆ ಗುಂಡೂರಾವ್​​​​ ಸಹಿ ಇದೆ. ನಿಮ್ಮ ಸಲಹೆ ನಮಗೆ ಬೇಕಿಲ್ಲ. ನಾನು ಸರ್ಕಾರ ಕೇಳಿದರೆ ಹಣ ನೀಡುತ್ತೇನೆ ಎಂದ್ದಿದೀರಿ. ನಮಗೆ ನಿಮ್ಮ ಹಣ ಬೇಕಿಲ್ಲ. ನಿಮ್ಮ ಬಳಿ ಅಷ್ಟು ಹಣ ಇದ್ದರೆ ರಾಜ್ಯದ ಪ್ರತಿ ಮನೆಗೆ 20 ಸಾವಿರ ರೂ. ಕೊಡಿ ಎಂದು ತಿರುಗೇಟು ನೀಡಿದರು. ಇನ್ನು ಇದೇ ವೇಳೆ ಹೊರ ರಾಜ್ಯದ ಕರ್ಮಿಕರ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್,  ಇದುವರೆಗೆ ರಾಜ್ಯದಿಂದ ಹೊರ ರಾಜ್ಯಕ್ಕೆ 9600 ಜನ ಕಾರ್ಮಿಕರು ಹೋಗಿದ್ದಾರೆ. ಒಡಿಶಾ, ರಾಜಸ್ಥಾನ, ಬಿಹಾರ, ಜಾರ್ಖಂಡ್ ರಾಜ್ಯಗಳ ಕಾರ್ಮಿಕರು ವಾಪಸ್ ಆಗಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕಾರ್ಮಿಕರು ಹೋಗಲು ಇನ್ನೂ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ಕೊಟ್ಟಿಲ್ಲ. 2 ಲಕ್ಷ ಜನ ಹೋಗಲು ನೊಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

Comments