ಅಂದು ಪಾಕಿಸ್ತಾನಕ್ಕೆ ನುಗ್ಗಿ ಹೊಡೆದ ಭಾರತೀಯ ಸೇನೆ, ಯಾಕೆ ಹಾಗೂ ಹೇಗೆ ಗೊತ್ತಾ.?

ಗಡಿಯಲ್ಲಿ ಕೈಲಾಗದಿದ್ದರೂ ಪಾಕಿಸ್ತಾನದ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಶ್ಮೀರದ ವಿಷಯದಲ್ಲಿ ತನ್ನ ತಾಕತ್ತನ್ನು ಮರೆತಿರುವ ಪಾಕಿಸ್ತಾನವು ಮತಿ ಭ್ರಮಣೆ ಯಾದಂತೆ ವರ್ತನೆ ಮಾಡುತ್ತಿದೆ. ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಹಲವಾರು ಜನ ತಿರುಗಿ ಬಿದ್ದಿರುವ ಕಾರಣ ಇದನ್ನು ಮರೆಮಾಚಲು ಕಾಶ್ಮೀರದ ವಿಷಯ ಸೇರಿದಂತೆ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿ ಪಾಕಿಸ್ತಾನದ ಜನರ ದೃಷ್ಟಿಯನ್ನು ಭಾರತದ ಕಡೆ ತಿರುಗಿಸಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಪಾಕಿಸ್ತಾನದ ಸೈನಿಕರು ಭಾರತೀಯ ಯೋಧರು ಕಡಿಮೆ ಇರುವ ಸಮಯವನ್ನು ನೋಡಿಕೊಂಡು ಸಾಮಾನ್ಯ ಜನರ ಮೇಲೆ ದಾಳಿ ಮಾಡಿ ಭಾರತೀಯ ಯೋಧರ ದೃಷ್ಟಿಯನ್ನು ಬೇರೊಂದು ಕಡೆ ನೆಡುವಂತೆ ಮಾಡಿ ಬೆನ್ನಿಗೆ ಚೂರಿ ಹಾಕುವಂತಹ ಹೇಡಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇದೇ ರೀತಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿ, ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಮೂಲಕ ಇಬ್ಬರನ್ನು ಇಹಲೋಕ ತ್ಯಜಿಸುವಂತೆ ಮಾಡಿದ್ದರು. ಇದೀಗ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಿದ್ದು, ಪಾಕಿಸ್ತಾನಕ್ಕೆ ಮುಟ್ಟಿ ಕೊಂಡು ನೋಡಿಕೊಳ್ಳುವಂತೆ ಉತ್ತರ ನೀಡಿದೆ.

ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ

ಹೌದು ಪಾಕಿಸ್ತಾನದ ಬಾಲ ಮುದುರಿಸಲು ಹಾಗೂ ಇಬ್ಬರು ಯೋಧರ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆಯು ಇಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದೆ. ಈ ಬಾರಿಯೂ ಕ್ಲೀನ್ ಸ್ವೀಪ್ ಔಟ್ ಮಾಡಿರುವ ಭಾರತೀಯ ಸೇನೆಯು, ಪಾಕಿಸ್ತಾನದ ಹತ್ತು ಸೈನಿಕರು ಸೇರಿದಂತೆ 22 ಉಗ್ರರನ್ನು ಹೊಡೆದುರುಳಿಸಿದೆ. ಅಂದು ಕೊಂಡಂತೆ ಯಾವೊಬ್ಬ ಭಾರತೀಯ ಯೋಧನಿಗೂ ಚಿಕ್ಕ ಗಾಯಗಳು ಸಹ ಆಗಿಲ್ಲ. ಆ ರೀತಿ ನುಗ್ಗಿ ಹೊಡೆದು ಭಾರತೀಯ ಸೇನೆಯು ಪರಾಕ್ರಮ ಮೆರೆದಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೀಲಂ ಕಣಿವೆಯ ಸಮೀಪದಲ್ಲಿ ಉಗ್ರರ ತಾಣಗಳ ಮೇಲೆ ದಾಳಿ ಮಾಡಿರುವ ಭಾರತೀಯ ಸೇನೆಯು, ನಮ್ಮ ತಂಟೆಗೆ ಬಂದರೆ ನುಗ್ಗಿ ಹೊಡೆಯುವುದು ಖಚಿತ ಎಂದು ಮತ್ತೊಮ್ಮೆ ಸಾರಿ ಹೇಳಿದೆ. ಇನ್ನಾದರೂ ಪಾಕಿಸ್ತಾನ ಸೇನೆಯು ತಾನು ಭಾರತದ ಮೇಲೆ ದಾಳಿ ಮಾಡಿದರೆ ನಿಮ್ಮ ಜೊತೆ ಕ್ರಿಕೆಟ್ ಆಡುವುದಿಲ್ಲ ಎಂದು ಭಾರತ ಹೇಳುವುದಿಲ್ಲ, ಬದಲಾಗಿ ನುಗ್ಗಿ ಹೊಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಗಡಿಯಲ್ಲಿ ಸೋಲನ್ನು ಒಪ್ಪಿಕೊಂಡರೆ ಒಳಿತು ಏನಂತೀರಾ?


Comments